ನವದೆಹಲಿ: ನೇಪಾಳದ ಉತ್ತರ ಗಡಿ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಮೃತಪಟ್ಟವರ ಕುಟುಂಬಸ್ಥರಿಗೆ, ಸಂತ್ರಸ್ತರಿಗೆ ಹಾಗೂ ಗಾಯಾಳುಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತೀವ್ರ ಸಂತಾಪ ಮತ್ತು ಸಂವೇದನೆಯನ್ನು ವ್ಯಕ್ತಪಡಿಸಿದೆ.
ಆಗಸ್ಟ್ 26ರ ಬುಧವಾರ ಬೆಳಿಗ್ಗೆ ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ರಸುವಾ, ಧಾದಿಂಗ್, ನುವಾಕೋಟ್, ಚಿತ್ವಾನ್ ಮತ್ತು ಪೂರ್ವ ನವಲ್ಪರಾಸಿ ಜಿಲ್ಲೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಈ ನೈಸರ್ಗಿಕ ವಿಕೋಪದಿಂದಾಗಿ ಈ ಜಿಲ್ಲೆಗಳ ಸಾವಿರಾರು ಜನರು ಆಪತ್ತಿಗೆ ಸಿಲುಕಿದ್ದಾರೆ.
“ಈ ಕಷ್ಟದ ಸಮಯದಲ್ಲಿ ಸಂತ್ರಸ್ತರಿಗೆ ನೆರವಾಗಲು ನಾವೆಲ್ಲರೂ ಸದಾ ಸಿದ್ಧರಿದ್ದೇವೆ ಮತ್ತು ಸಾಧ್ಯವಿರುವ ಎಲ್ಲಾ ನೆರವು ನೀಡಲು ಶ್ರಮಿಸುತ್ತೇವೆ. ಈ ಅನಿರೀಕ್ಷಿತ ದುರಂತದ ಸಮಯದಲ್ಲಿ ಸಂತ್ರಸ್ತರ ಸಹಾಯಕ್ಕಾಗಿ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ನೆರವು ನೀಡಲು ಮುಂದೆ ಬರಬೇಕು,” ಎಂದು ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
