ಕೆಲವೊಂದು ಸ್ಥಳಗಳಲ್ಲಿ ವಿಶೇಷವಾಗಿ ಅವನ ಶಕ್ತಿ ಕಂಡುಬರುತ್ತದೆ. ಅದು ಹೇಗೆಂದರೆ, ನಿಮ್ಮ ಮನೆಯಲ್ಲಿರುವ ವಿದ್ಯುತ್ತಿನ ಶಕ್ತಿಯು ತಂತಿ ಇರುವಡೆಯಲ್ಲೆಲ್ಲ ಒಂದೇ ರೀತಿ ಇದ್ದರೂ ನೀವು ಬಳಸುವ ಬಲ್ಬ್ಗಳ ತಾಕತ್ತಿಗೆ ಅನುಗುಣವಾಗಿ ಬೆಳಕು ಹೆಚ್ಚು ಕಡಿಮೆಯಾಗಿ ಬರುತ್ತದಲ್ಲವೇ? ಇದೂ ಹಾಗೆಯೇ. ನಿಮ್ಮ ಬಲ್ಬ್ನ ಕ್ಯಾಂಡಲ್ ಹೆಚ್ಚು ಕಡಿಮೆಯಾದಂತೆಲ್ಲ ಅದರ ಪ್ರಕಾಶವೂ ವ್ಯತ್ಯಾಸವಾಗುತ್ತದಲ್ಲವೇ? ಹರಿಯುವ ನೀರು ಒಂದೊಂದು ಸ್ಥಳದಲ್ಲಿ ಒಂದೊಂದು ವೇಗ, ಒಂದೊಂದು ಶಕ್ತಿಯನ್ನು ಪಡೆದಿರುತ್ತದೆ ಎಂಬುದು ಅನುಭವ ಸಿದ್ಧ ವಿಚಾರವಾಗಿದೆ.
ಇನ್ನು ಸನಾತನ ಧರ್ಮದ ವಿಚಾರದಲ್ಲಿ ನಿಮ್ಮ ಇನ್ನೊಂದು ಪ್ರಶ್ನೆ ಏನೆಂದರೆ, “ನಿಮಗೆ ನಮ್ಮಂತೆ ಒಂದು ದೇವರಿಲ್ಲ. ಹಲವು ದೇವರುಗಳನ್ನು ಪೂಜಿಸುತ್ತೀರಿ” ಅನ್ನೋದು.
ಇದರಿಂದ ನಿಮಗೇನು ಸಮಸ್ಯೆ?
ನಿಮ್ಮ ಮತಗಳು ನೆನ್ನೆ ಮೊನ್ನೆ ಹುಟ್ಟಿಕೊಂಡಂಥವು. ಹಾಗಾಗಿ ನಿಮ್ಮ ಗಮನಕ್ಕೆ ಬಂದದು ಒಂದೇ ದೇವರು. ನಮ್ಮದು ಸನಾತನ ಧರ್ಮವಾದ ಕಾರಣ ಯುಗಯುಗಾಂತರಗಳಿಂದಲೂ ಇದ್ದುದಾಗಿದೆ. ಇಂದೂ ಮುಂದುವರೆದುಕೊಂಡು ಬಂದಿದೆ.
ವೇದಗಳ ಕಾಲದಲ್ಲಿ ನಮಗೂ ನಿಮ್ಮಂತೆಯೇ ಒಬ್ಬನೇ ದೇವರು ಗೋಚರಿಸಿದ್ದು. ಕಾಲಂತರದಲ್ಲಿ ಇನ್ನೂ ಹಲವಾರು ದೇವರುಗಳಿರುವುದು ನಮ್ಮ ಪೂರ್ವಜರ ಗಮನಕ್ಕೆ ಬಂತು. ಹಾಗಾಗಿ ಅವರವರು ಅವರವರಿಗೆ ಬೇಕಾದ ದೇವರನ್ನು ಪೂಜಿಸ ತೊಡಗಿದರು. ಆಮೇಲೆ ಏನಾಯಿತು ಎಂದರೆ, “ಈ ಎಲ್ಲ ಬೇರೆ ಬೇರೆ ದೇವರುಗಳು ಒಬ್ಬನೇ ದೇವರಿಂದ ಹೊರಹೊಮ್ಮಿದ ವಿವಿಧ ಶಕ್ತಿಗಳು” ಅನ್ನುವುದನ್ನು ನಮ್ಮವರು ಕಂಡುಕೊಂಡರು. ಈ ಬಗೆಗೆ ಉಪನಿಷತ್ತಿನಲ್ಲಿ ನೋಡಬಹುದು. ವೇದಗಳಲ್ಲಿ ಕೂಡ ಅಂದೇ ”ಏಕಂ ಸತ್ ವಿಪ್ರಾಹ ಬಹುಧಾ ವದಂತಿ” ಅನ್ನಲಾಗಿದೆ. ಅಂದರೆ, “ಇರುವ ಒಬ್ಬನೇ ದೇವರನ್ನು ತಿಳಿದವರು ಅನೇಕ ರೀತಿಯಲ್ಲಿ ಕಂಡುಕೊಂಡಿದ್ದಾರೆ” ಅಂತ.
ಈಗ ನೋಡಿ, ದೇವರಿಗೆ ಅನೇಕ ರೀತಿಯ ಅಥವಾ ಅಗಣಿತ ಶಕ್ತಿಗಳಿವೆ. ಉದಾಹರಣೆಗೆ ಅವನಿಗೆ ಸೃಷ್ಟಿಸುವ ಶಕ್ತಿ ಇದೆ, ಆ ಶಕ್ತಿಯನ್ನು ಬ್ರಹ್ಮನೆಂದು ಕರೆದರು. ಸೃಷ್ಟಿಸಿರುವುದನ್ನು ಕಾಪಾಡುವ ದೇವನ ಶಕ್ತಿಗೆ ವಿಷ್ಣು ಎಂದು ಕರೆದರು. ಹಾಗೆಯೇ, ದೇವನಿಗಿರುವ ಲಯಗೊಳಿಸುವ ಅಂದರೆ ನಾಶ ಮಾಡುವ ಶಕ್ತಿಯನ್ನು ಶಿವನೆಂದು ಕರೆದರು. ಅಂದರೆ, ಈ ತ್ರಿಮೂರ್ತಿಗಳು ಒಂದೇ!
ಹೀಗೆಯೇ ಮಳೆಗರೆಯುವ ಶಕ್ತಿಗೊಂದು ಹೆಸರು, ಸುಡುವ ಶಕ್ತಿಗೊಂದು ಹೆಸರು – ಹೀಗೆ ವಿವಿಧ ಶಕ್ತಿಗಳಿಗೆ ವಿವಿಧ ರೀತಿಯ ಹೆಸರು ಕೊಟ್ಟು ಪೂಜಿಸ ತೊಡಗಿದರು. ಇದರಿಂದ ಸೆಮೆಟಿಕ್ ಮತೀಯರಿಗೆ ಏನಾದರೂ ಸಮಸ್ಯೆಯಾಗುತ್ತದೋ? ವಾಸ್ತವವಾಗಿ ಇದರಿಂದ ಅವರಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ. ಅವರೇ ಸನಾ ತನ ಧರ್ಮೀಯರಿಗೆ ಸಮಸ್ಯೆಯಾಗಿದ್ದಾರೆ!
ಈ ಎಲ್ಲ ಪದ್ಧತಿಗಳು ನಿಮ್ಮ ಮತಗಳು ಹುಟ್ಟುವುದಕ್ಕಿಂತ ಎಷ್ಟೋ ಸಾವಿರ ವರ್ಷಗಳಿಂದಲೂ ನಮ್ಮಲ್ಲಿ ನಡೆದುಕೊಂಡು ಬಂದಿವೆ. ಅರೆ ಬೆಂದ ಮತೀಯರು ಈ ಕಲಿಯುಗದಲ್ಲಿ ಬಂದು ಆಕ್ಷೇಪಿಸಿದರು ಅಂತ ಆ ಪದ್ಧತಿಗಳನ್ನು ಬಿಡಲಿಕ್ಕಾಗುತ್ತದೇನು?
ಸನಾತನ ಧರ್ಮದ ಶ್ರೇಷ್ಠತೆಯನ್ನು ಒಮ್ಮೆ ನೋಡಿ: “ಸರ್ವೇ ಜನಾಃ ಸುಖಿನೋ ಭವಂತು” ಅಂತ ಹೇಳಲಾಗುತ್ತದೆ. “ಸನಾತನ /ಧರ್ಮೀಯರು ಮಾತ್ರ ಸುಖವಾಗಿರಲಿ” ಅಂತ ಹೇಳುವ ಕ್ರಮವಿಲ್ಲ. ಯಾವುದೇ ಮತ, ಧರ್ಮ ಮಾತ್ರ ಸುಖವಾಗಿರಲಿ ಅನ್ನುವುದಿಲ್ಲ. ವಸುದೈವ ಕುಟುಂಬಕಂ” ಅನ್ನುವುದು ನಮ್ಮ ಸನಾತನ ಧರ್ಮದ ಆಶಯ. “ನಮ್ಮ ಧರ್ಮ ಮಾತ್ರ ಈ ಜಗತ್ತಿನಲ್ಲಿರಬೇಕು. ಉಳಿದ ಮತಗಳು ನಾಶವಾಗಬೇಕು. ನಾಶವಾಗದಿದ್ದರೆ ನಾಶ ಮಾಡೋಣ” ಎಂಬಂತಹ ನಿಲುವು ಯಾವತ್ತೂ ನಮ್ಮದಲ್ಲ.
ಸೆಮೆಟಿಕ್ ಮತೀಳಯರು ತಿಳಿಯಲೇಬೇಕಾದ ಒಂದು ಪ್ರಮುಖ ವಿಚಾರವೇನೆಂದರೆ, “ತಮ್ಮ ಮತದ ಜನಸಂಖ್ಯೆಯನ್ನು ಹೆಚ್ಚು ಮಾಡಿಕೊಂಡ ಮಾತ್ರಕ್ಕೆ ಯಾವುದೇ ಮತವು ಶ್ರೇಷ್ಠವೆನಿಸುವುದಿಲ್ಲ” ಎಂಬುದು.
ಭಾರತೀಯ ಸನಾತನ ಧರ್ಮವು ಯಾಕೆ ಶ್ರೇಷ್ಠ ಆಗುತ್ತೆ? ಸನಾತನ ಧರ್ಮವೆಂಬ ವಿಶಾಲವಾದ ವಟವೃಕ್ಷದ ಅಡಿಯಲ್ಲಿ ದ್ವೈತಿಗಳು, ಅದ್ವೈತಿಗಳು, ವಿಶಿಷ್ಟಾದ್ವೈ ತಿಗಳು, ದೇವರನ್ನೇ ನಂಬದ ನಾಸ್ತಿಕರು- ಹೀಗೆ ನಾನಾ ಚಿಂತನೆಯ ಜನಸಮೂ ಹವಿದೆ. “ಆ ನೋ ಭದ್ರಾಹ ಕ್ರತುವೋ ವಿಶ್ವತಹ” ಎಂಬ ಋಗ್ವೇದದ ಚಿಂತನೆಯ ಪ್ರಕಾರ ಶ್ರೇಷ್ಠ ವಿಚಾರಧಾರೆಗಳನ್ನು ಸ್ವೀಕರಿಸುವ, ನಮ್ಮದಾಗಿಸಿಕೊಳ್ಳುವ ಅತ್ಯಂತ ವಿಶಾಲ ಮನೋಭಾವದ ಧರ್ಮವೊಂದು ಈ ಜಗತ್ತಿನಲ್ಲಿದ್ದರೆ ಅದು ಸನಾತನ ಧರ್ಮ ಮಾತ್ರ. “ನಾವು ಹೇಳುವುದು ಮಾತ್ರ ಸತ್ಯ, ಅದನ್ನು ಮಾತ್ರ ನಂಬಬೇಕು. ಉಳಿದ ವಿಚಾರಧಾರೆಗಳೆಲ್ಲ ಹರಾಮ್” ಎನ್ನುವಂತಹ ಸಂಕುಚಿತ ಚಿಂತನೆ ನಮ್ಮದಲ್ಲ.
ಭಗವದ್ಗೀತೆಯಲ್ಲಿ ಸಹ ಕೃಷ್ಣ ಅರ್ಜುನನಿಗೆ ಹೇಳಿದ್ದು ಇದನ್ನೇ. “ಈ ಜ್ಞಾನವನ್ನು ನಿನಗೆ ನಾನು ಹೇಳಿದ್ದೇನೆ. ನಿನಗೆ ಹೇಗೆ ಸರಿ ಎನಿಸುತ್ತದೋ ಹಾಗೆ ನಡೆದುಕೋ” ಅಂತ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದಾನೆ. ನಾನೇ ದೇವರು. ನಾನು ಹೇಳಿದ್ದೇ ಸತ್ಯ. ನಾನು ಹೇಳಿದಂತೆ ಬಾಯಿ ಮುಚ್ಚಿಕೊಂಡು ನಡೆದುಕೊಳ್ಳಬೇಕು. ಏನನ್ನೂ ಪ್ರಶ್ನಿಸಬಾರದು” ಎಂಬಂತಹ ಸಂಕುಚಿತ ಮನೋಭಾವದ ಠೇಂಕಾರದ ಮಾತುಗಳನ್ನು ಕೃಷ್ಣ ಹೇಳಲಿಲ್ಲ!
ಈ ಎಲ್ಲಾ ಕಾರಣಗಳಿಂದಾಗಿ ಸೆಮೆಟಿಕ್ ಮತದವರು ಸನಾತನ ಧರ್ಮೀಯರಿಗೆ ಧರ್ಮದ ವಿಚಾರದಲ್ಲಿ ಪಾಠ ಮಾಡುವ ಅಗತ್ಯ ಖಂಡಿತ ಇಲ್ಲ. ಏಕೆಂದರೆ, ಕುಸಿಯುತ್ತಿರುವ ನೆಲದ ಮೇಲೆ ನಿಂತವರು ಸುಭದ್ರವಾದ ನೆಲದ ಮೇಲೆ ಇರುವವರಿಗೆ “ಬನ್ನಿ, ನಿಮಗೆ ರಕ್ಷಣೆ ಕೊಡುತ್ತೇವೆ” ಅನ್ನುವುದು ಹಾಸ್ಯಾಸ್ಪದ!
- ಜಿ. ವಿ. ಗಣೇಶಯ್ಯ, ಹೆಗ್ಗದ್ದೆ.
ಮೊಬೈಲ್: 99002 06907
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
