ನವದೆಹಲಿ: ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 7, 2026 ರವರೆಗಿನ ಅವಧಿಯಲ್ಲಿ, ಮತಾಂತರ, ಅಂತರಧರ್ಮೀಯ ಸಂಬಂಧಗಳು ಮತ್ತು “ಲವ್ ಜಿಹಾದ್” ಆರೋಪಗಳಿಗೆ ಸಂಬಂಧಿಸಿದ 10 ಪ್ರಮುಖ ಘಟನೆಗಳು ಭಾರತ, ಪಾಕಿಸ್ತಾನ ಮತ್ತು ಯುುಕೆಯಲ್ಲಿ (ಬ್ರಿಟನ್) ವರದಿಯಾಗಿವೆ.
ಹಿಂದೂ ಮಹಿಳೆಯರು ಮತ್ತು ಬಾಲಕಿಯರ ವಿರುದ್ಧ ಧರ್ಮ ಪರಿವರ್ತನೆ, ವಂಚನೆ, ಲೈಂಗಿಕ ಶೋಷಣೆ, ಬ್ಲ್ಯಾಕ್ಮೇಲ್, ಅಪಹರಣ ಮತ್ತು ಒತ್ತಡ ಹೇರುವ ಘಟನೆಗಳು ಈ ವಾರದಲ್ಲಿಯೂ ಮುಂದುವರಿದಿವೆ. ಈ ಸಾಪ್ತಾಹಿಕ ವರದಿಯಲ್ಲಿ ಉತ್ತರ ಪ್ರದೇಶ, ಗುಜರಾತ್, ಆಂಧ್ರಪ್ರದೇಶ ಹಾಗೂ ಇತರ ಸ್ಥಳಗಳಲ್ಲದೆ ಪಾಕಿಸ್ತಾನ ಮತ್ತು ಯುಕೆಯಿಂದ ವರದಿಯಾದ ಪ್ರಕರಣಗಳನ್ನು ಸೇರಿಸಲಾಗಿದೆ.
ಹಲವು ಪ್ರಕರಣಗಳಲ್ಲಿ ಹಿಂದೂ ಮಹಿಳೆಯರು ಅಥವಾ ಬಾಲಕಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ಅಥವಾ ವೈಯಕ್ತಿಕ ಸಂಪರ್ಕದ ಮೂಲಕ ಸಂಪರ್ಕಿಸಿ ಮತಾಂತರಗೊಳ್ಳುವಂತೆ ಒತ್ತಡ ಹೇರಲಾಗಿದೆ ಎಂಬ ಆರೋಪಗಳಿವೆ. ಕೆಲವು ಪ್ರಕರಣಗಳಲ್ಲಿ ಧರ್ಮವನ್ನು ಮುಚ್ಚಿಡುವುದು, ಮದುವೆಯ ಭರವಸೆ, ಲೈಂಗಿಕ ಶೋಷಣೆ, ಬೆದರಿಕೆಗಳು, ಕಿರುಕುಳ ಅಥವಾ ಬಬ್ಲ್ಯಾಕ್ಮೇಲ್ ಮಾಡಿರುವ ಆರೋಪಗಳೂ ಸೇರಿವೆ. ಇನ್ನು ಕೆಲವು ಪ್ರಕರಣಗಳು ಅಪ್ರಾಪ್ತ ಹಿಂದೂ ಬಾಲಕಿಯರನ್ನು ಆಕರ್ಷಿಸಿ ಕುಟುಂಬದಿಂದ ದೂರ ಕರೆದೊಯ್ದ ಆರೋಪಗಳಿಗೆ ಸಂಬಂಧಿಸಿವೆ.
ಖಾಸಗಿ ಫೋಟೋಗಳು ಅಥವಾ ವೀಡಿಯೊಗಳನ್ನು ಬಳಸಿ ಬ್ಲ್ಯಾಕ್ಮೇಲ್ ಮಾಡುವುದು, ವೇಶ್ಯಾವಾಟಿಕೆಗೆ ಅಥವಾ ಮತಾಂತರಕ್ಕೆ ಒತ್ತಡ ಹೇರುವ ಆರೋಪಗಳೂ ಈ ಘಟನೆಗಳಲ್ಲಿ ಸೇರಿವೆ. ಹಲವು ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವುದು, ಬಂಧನಗಳು, ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳಂತಹ ಪೊಲೀಸ್ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಕಿಸ್ತಾನದ ಒಂದು ಪ್ರಕರಣದಲ್ಲಿ, ಅಪಹರಣಕ್ಕೊಳಗಾಗಿ ಮತಾಂತರ ಮತ್ತು ಮದುವೆಗೆ ಒತ್ತಡಕ್ಕೊಳಗಾಗಿದ್ದ ಹಿಂದೂ ಮಹಿಳೆಯನ್ನು ಆಕೆಯ ಕುಟುಂಬಕ್ಕೆ ಒಪ್ಪಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಮದುವೆಯ ಹೆಸರಿನಲ್ಲಿ ಬಲವಂತದ ಮತಾಂತರ, ಕಿರುಕುಳ, ಬೆದರಿಕೆಗಳು ಮತ್ತು ಬಹುಪತ್ನಿತ್ವದ ಆರೋಪಗಳು ಹಾಗೂ ಉತ್ತರ ಪ್ರದೇಶದಲ್ಲಿ ಅಕ್ರಮ ಮತಾಂತರ ಜಾಲಕ್ಕೆ ಸಂಬಂಧಿಸಿದಂತೆ ಗ್ಯಾಂಗ್ಸ್ಟರ್ ಕಾಯ್ದೆಯಡಿ ಕ್ರಮ ಕೈಗೊಂಡಿರುವುದು ವರದಿಯಾಗಿದೆ. ಲಂಡನ್ನಿಂದ ಬಂದ ಮತ್ತೊಂದು ಪ್ರಕರಣದಲ್ಲಿ, ಅಮೃತಸರದ ಸಿಖ್ ಮಹಿಳೆಯೊಬ್ಬರು ಧರ್ಮ ಬದಲಾಯಿಸಲು ಮತ್ತು ತಮ್ಮ ಹೆಸರನ್ನು ಬದಲಾಯಿಸಲು ಪ್ರಭಾವಕ್ಕೊಳಗಾಗಿದ್ದಾರೆ ಎಂದು ಅವರ ಕುಟುಂಬ ಆತಂಕ ವ್ಯಕ್ತಪಡಿಸಿದೆ.
ವರದಿಯಾದ 10 ಪ್ರಮುಖ ಪ್ರಕರಣಗಳು:
- ಮತಾಂತರವಾಗುವಂತೆ ಬಿಬಿಎ (BBA) ವಿದ್ಯಾರ್ಥಿನಿಗೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿದ ಹಫೀಜ್; ಶಿಕ್ಷಣ ಅರ್ಧಕ್ಕೆ ಕೈಬಿಟ್ಟ ಸಂತ್ರಸ್ತೆ:
ಕಾನ್ಪುರದ ರಾವತ್ಪುರ ಪ್ರದೇಶದಲ್ಲಿ ವಾಸಿಸುತ್ತಿರುವ ಹಿಂದೂ ಬಿಬಿಎ ವಿದ್ಯಾರ್ಥಿನಿಯೊಬ್ಬರು, ಹಫೀಜ್ ಹಾಗೂ ಮತ್ತೊಬ್ಬ ಮಹಿಳೆ ತಮಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ ಮತ್ತು ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆ ವಿದ್ಯಾರ್ಥಿನಿಯು ತನ್ನ ವಿದ್ಯಾಭ್ಯಾಸಕ್ಕಾಗಿ ಅಜ್ಜಿ-ತಾತಂದಿರ ಮನೆಯಲ್ಲಿ ವಾಸಿಸುತ್ತಿದ್ದಳು. ವಿದ್ಯಾರ್ಥಿನಿಯ ದೂರಿನ ಪ್ರಕಾರ, ಆ ಹಫೀಜ್ ಹಾಗೂ ಸ್ಥಳೀಯ ಮಹಿಳೆಯೊಬ್ಬರು ಇಸ್ಲಾಂ ಧರ್ಮ ಸ್ವೀಕರಿಸುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ವಿರೋಧಿಸಿದಾಗ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದರು. ಆತಂಕಗೊಂಡಿರುವ ವಿದ್ಯಾರ್ಥಿನಿಯು ನಿರಂತರ ಬೆದರಿಕೆಗಳು ಮತ್ತು ಭಯದ ವಾತಾವರಣದಿಂದಾಗಿ ತನ್ನ ಬಿಬಿಎ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಸಂತ್ರಸ್ತೆ ರಾವತ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. - ಲಂಡನ್ನಲ್ಲಿ ಪಾಕಿಸ್ತಾನ ಮೂಲದ ಟ್ಯಾಕ್ಸಿ ಡ್ರೈವರ್ ಬಲೆಗೆ ಬಿದ್ದ ಅಮೃತಸರದ ಸಿಖ್ ಮಹಿಳೆ, ಮತಾಂತರಗೊಂಡು ‘ಐರಾ’ ಎಂದು ನಾಮಕರಣ:
ಸುಮಾರು ಎರಡು ವರ್ಷಗಳ ಹಿಂದೆ ಉನ್ನತ ಶಿಕ್ಷಣಕ್ಕಾಗಿ ಲಂಡನ್ಗೆ ತೆರಳಿದ್ದ ಅಮೃತಸರದ ಸಿಖ್ ಮಹಿಳೆಯೊಬ್ಬರು, ಪಾಕಿಸ್ತಾನ ಮೂಲದ ಮುಸ್ಲಿಂ ಟ್ಯಾಕ್ಸಿ ಡ್ರೈವರ್ನ ಸಂಪರ್ಕಕ್ಕೆ ಬಂದ ನಂತರ ಮತಾಂತರದ ಬಲೆಗೆ ಬಲಿಪಶುವಾಗಿದ್ದಾರೆ. ಈಗಾಗಲೇ ಎರಡು ಮದುವೆಯಾಗಿರುವ ಆ ಟ್ಯಾಕ್ಸಿ ಡ್ರೈವರ್ ಆ ಮಹಿಳೆಯ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಧರ್ಮ ಬದಲಾಯಿಸಿ ‘ಐರಾ’ ಎಂದು ಹೆಸರು ಬದಲಾಯಿಸಿದ್ದಾನೆ. ಕಳೆದ ಒಂದು ತಿಂಗಳಿಂದ ಪೋಷಕರ ಕರೆಗಳಿಗೆ ಸ್ಪಂದಿಸದ ಕಾರಣ ಆತಂಕಗೊಂಡ ಕುಟುಂಬಸ್ಥರು ಬ್ರಿಟನ್ನಲ್ಲಿರುವ ಸಿಖ್ ಸಮುದಾಯದವರ ಸಹಾಯ ಕೋರಿದ್ದಾರೆ. ಸ್ಥಳೀಯರು ಆಕೆಯ ಮನೆಗೆ ತೆರಳಿದಾಗ, ಅಲ್ಲಿನ ಮಹಿಳೆಯೊಬ್ಬರು ಆಕೆಯನ್ನು ‘ಐರಾ’ ಎಂದು ಕರೆದಿದ್ದಾರೆ. ಕುಟುಂಬಸ್ಥರು ಆಕೆಯನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಮತ್ತು ಬ್ರಿಟನ್ನ ಸಿಖ್ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. - ಶಾಹಜಹಾನ್ಪುರದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಿದ ಆರೋಪದ ಮೇಲೆ ಉವೈಸ್ ಬಂಧನ:
ಶಾಹಜಹಾನ್ಪುರದ ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಉವೈಸ್ ಅಲಿಯಾಸ್ ಲಲ್ಲಾ ಎಂಬಾತ ಅಪ್ರಾಪ್ತ ಹಿಂದೂ ಬಾಲಕಿಯನ್ನು ಪ್ರಲೋಭನೆಗೆ ಒಡ್ಡಿ ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯನ್ನು ಸಂಶಯಾಸ್ಪದ ರೀತಿಯಲ್ಲಿ ಕರೆದೊಯ್ಯುತ್ತಿದ್ದಾಗ ಹಿಂದೂ ರಕ್ಷಾ ದಳದ ಸದಸ್ಯರು ಇಬ್ಬರನ್ನೂ ವಶಕ್ಕೆ ಪಡೆದು ತಿಲ್ಹಾರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ತನಿಖೆಯ ವೇಳೆ ಬಾಲಕಿ ಅಪ್ರಾಪ್ತಳೆ ಎಂಬುದು ದೃಢಪಟ್ಟಿದ್ದು, ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸೆಪ್ಟೆಂಬರ್ 5 ರಂದು ಸುಭಾಷ್ನಗರ ತಿರಾಹ ಬಳಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. - ಕಾನ್ಪುರದಲ್ಲಿ ಧರ್ಮ ಮುಚ್ಚಿಟ್ಟು, ಮತಾಂತರಕ್ಕೆ ಒತ್ತಾಯಿಸಿ ಕಿರುಕುಳ ನೀಡಿದ ಶೋಯೆಬ್:
ಕಾನ್ಪುರದ ಬಜಾರಿಯಾ ಪ್ರದೇಶದಲ್ಲಿ ಅಂಕಿತ್ ಎಂದು ಪರಿಚಯಿಸಿಕೊಂಡು ಕಾಲೇಜು ವಿದ್ಯಾರ್ಥಿನಿಯೊಬ್ಬಳೊಂದಿಗೆ ಸ್ನೇಹ ಬೆಳೆಸಿದ ಶೋಯೆಬ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ಮೂರು ವರ್ಷಗಳ ಕಾಲ ದೈಹಿಕ ಸಂಬಂಧ ಹೊಂದಿದ್ದನು. 2018ರ ಏಪ್ರಿಲ್ನಲ್ಲಿ ಆರ್ಯ ಸಮಾಜದಲ್ಲಿ ಮದುವೆಯಾದ ಬಳಿಕ ಆತನ ನಿಜವಾದ ಹೆಸರು ಶೋಯೆಬ್ ಎಂದೂ, ಆತನಿಗೆ ಈಗಾಗಲೇ ಮದುವೆಯಾಗಿ ಮಗುವಿದೆ ಎಂದೂ ಮಹಿಳೆಗೆ ತಿಳಿದುಬಂದಿದೆ. ನಂತರ ಆಕೆಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿ, ಕುಡಿದು ಹಲ್ಲೆ ನಡೆಸಲಾರಂಭಿಸಿದ್ದಾನೆ. ಕಿರುಕುಳ ತಾಳಲಾರದೆ 2021ರಿಂದ ಆಕೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಆತ ಆಕೆಯನ್ನು ಹಿಂಬಾಲಿಸುತ್ತಿದ್ದನು. 2026ರ ಮಾರ್ಚ್ನಲ್ಲಿ ಆಕೆಯ ಕೆಲಸದ ಸ್ಥಳಕ್ಕೆ ನುಗ್ಗಿ ಗಲಾಟೆ ಮಾಡಿದ್ದರಿಂದ ಆಕೆಯ ಉದ್ಯೋಗ ಕಳೆದುಹೋಗಿದೆ. ಆಸಿಡ್ ಎರಚಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ನಂತರ ಆಕೆ ಬಜಾರಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ. - ಅಹಮದಾಬಾದ್ ಮಹಿಳಾ ಪೋಲೀಸ್ ಕಾನ್ಸ್ಟೆಬಲ್ಗೆ ವಂಚಿಸಿ, ಲೈಂಗಿಕ ದೌರ್ಜನ್ಯ ಎಸಗಿ ಮತಾಂತರಕ್ಕೆ ಒತ್ತಡ ಹೇರಿದ ವಿವಾಹಿತ ವ್ಯಕ್ತಿ:
ಅಹಮದಾಬಾದ್ನ ಗೋಮತಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿಂದೂ ಮಹಿಳಾ ಪೋಲೀಸ್ ಕಾನ್ಸ್ಟೆಬಲ್ ಒಬ್ಬರು, ಉತ್ತರ ಗುಜರಾತಿನ ಪಟಾನ್ ಮೂಲದ ವಿವಾಹಿತ ವ್ಯಕ್ತಿ ಮಜಿದ್ ಖಾನ್ ಪಠಾಣ್ (ಚೌಹಾಣ್) ತನ್ನ ವಿವಾಹಿತ ಸ್ಥಿತಿಯನ್ನು ಮುಚ್ಚಿಟ್ಟು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ನೀಡಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ಸುಮಾರು ₹ 17 ಲಕ್ಷ ವಂಚಿಸಿದ್ದಾನೆ. ಅಲ್ಲದೆ, ಸರ್ಕಾರಿ ಉದ್ಯೋಗ ಬಿಟ್ಟು ಮತಾಂತರಗೊಳ್ಳುವಂತೆ ನಿರಂತರವಾಗಿ ಒತ್ತಡ ಹೇರಿದ್ದಾನೆ. ಈ ಬಗ್ಗೆ ಗೋಮತಿಪುರ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. - ಪಾಕಿಸ್ತಾನದಲ್ಲಿ ಅಪಹರಣಕ್ಕೊಳಗಾಗಿ ಮತಾಂತರ ಮತ್ತು ಮದುವೆಗೆ ಒತ್ತಡಕ್ಕೊಳಗಾಗಿದ್ದ ಹಿಂದೂ ಮಹಿಳೆ; ಬಿಡುಗಡೆಗೆ ನ್ಯಾಯಾಲಯ ಆದೇಶ:
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸಂಗಾರ್ ಜಿಲ್ಲೆಯ ನಿವಾಸಿ ರಿತಾ (21) ಎಂಬ ಹಿಂದೂ ಯುವತಿಯನ್ನು ಅಪರಿಚಿತರು ಅಪಹರಿಸಿದ್ದರು. ಪಂಜಾಬ್ ಪ್ರಾಂತ್ಯದ ಗುಜ್ರಾನ್ವಾಲಾಕ್ಕೆ ಕರೆದೊಯ್ದು ಇಸ್ಲಾಂ ಧರ್ಮ ಸ್ವೀಕರಿಸುವಂತೆ ಮತ್ತು ಈಗಾಗಲೇ ಮದುವೆಯಾಗಿರುವ ನಜೀರ್ ಹುಸೇನ್ ಎಂಬಾತನನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದರು. ಸಂತ್ರಸ್ತೆಯ ಸಹೋದರ ನೀಡಿದ ದೂರು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಯುವತಿಯನ್ನು ರಕ್ಷಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯದಲ್ಲಿ ಯುವತಿ ತನ್ನ ಸಹೋದರನೊಂದಿಗೆ ಮನೆಗೆ ಹೋಗುವಿರಾ ಎಂದು ಇಚ್ಛೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಆಕೆಯನ್ನು ಕುಟುಂಬದೊಂದಿಗೆ ಕಳುಹಿಸಲು ನ್ಯಾಯಾಲಯ ಆದೇಶಿಸಿತು. - ವಾರಣಾಸಿಯಲ್ಲಿ ಅತ್ಯಾಚಾರ, ಅಶ್ಲೀಲ ವೀಡಿಯೊಗಳ ಮೂಲಕ ಬ್ಲ್ಯಾಕ್ಮೇಲ್ ಮತ್ತು ಮತಾಂತರಕ್ಕೆ ಒತ್ತಡ ಹೇರಿದ ಮೊಹಮ್ಮದ್ ಫೈಜ್ ಬಂಧನ:
ವಾರಣಾಸಿಯ ಕಂಟೋನ್ಮೆಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಹಮ್ಮದ್ ಫೈಜ್ ಎಂಬಾತ 20 ವರ್ಷದ ಹಿಂದೂ ಯುವತಿಯೊಂದಿಗೆ ಆಪ್ತತೆ ಬೆಳೆಸಿ ಆಕೆಯ ಒಪ್ಪಿಗೆಯಿಲ್ಲದೆ ಅಶ್ಲೀಲ ವೀಡಿಯೊ ಹಾಗೂ ಫೋಟೋಗಳನ್ನು ಸೆರೆಹಿಡಿದಿದ್ದನು. ಆ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿ ಬ್ಲ್ಯಾಕ್ಮೇಲ್ ಮಾಡಿ, ವೇಶ್ಯಾವಾಟಿಕೆಗೆ ಮತ್ತು ಮತಾಂತರಕ್ಕೆ ಒಳಪಡಿಸಲು ಯತ್ನಿಸಿದ್ದಾನೆ. ಯುವತಿ ನಿರಾಕರಿಸಿದಾಗ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ. ವಾರಣಾಸಿ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. - ಗೋಂಡಾದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಿದ ಆರೋಪಿ ರಿಜ್ವಾನ್ ಬಂಧನ:
ಗೋಂಡಾದ ರೂಪೈದಿಹಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯನ್ನು ಪ್ರಲೋಭನೆಗೆ ಒಡ್ಡಿ ಅಪಹರಿಸಿದ್ದ ರಿಜ್ವಾನ್ ಅಲಿಯಾಸ್ ಜೀತು ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಂದೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ರೈಲ್ವೆ ಸೇತುವೆಯ ಅಂಡರ್ಪಾಸ್ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. - ಮುಝಫರ್ನಗರದಲ್ಲಿ ಅಕ್ರಮ ಮತಾಂತರ ಜಾಲದ ಆರೋಪಿ ಗ್ಯಾಂಗ್ಸ್ಟರ್ ಕಾಯ್ದೆಯಡಿ ಬಂಧನ:
ಉತ್ತರ ಪ್ರದೇಶದ ಮುಝಫರ್ನಗರ ಜಿಲ್ಲೆಯ ಚರ್ಥಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮತಾಂತರ ಜಾಲದಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಅಕ್ರಮ ಮತಾಂತರ ನಡೆಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದ ಜಾಲದ ಪ್ರಮುಖ ಆರೋಪಿಯ ವಿರುದ್ಧ ಗ್ಯಾಂಗ್ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. - ಬಲವಂತದ ಮತಾಂತರ, ಕಿರುಕುಳ ಮತ್ತು ಬಹುಪತ್ನಿತ್ವ ಆರೋಪಿಸಿ ಕಾಕಿನಾಡದಲ್ಲಿ ಹಿಂದೂ ಮಹಿಳೆಯಿಂದ ದೂರು:
ಜಗನ್ನಾಥಪುರದ ನಿವಾಸಿ ಸಿರಿಪುರಿ ಬಾಲ ರಮ್ಯಾ ಎಂಬವರು ತಮ್ಮ ಪತಿ ಗೌಸ್ ಮೊಹಿಯುದ್ದೀನ್ ವಿರುದ್ಧ ಬಲವಂತದ ಧರ್ಮ ಪರಿವರ್ತನೆ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕಾಕಿನಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಎಂಟು ವರ್ಷಗಳ ಹಿಂದೆ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದ ಆಕೆಗೆ, ಮದುವೆಯ ನಂತರ ಬಲವಂತವಾಗಿ ಮತಾಂತರಗೊಳಿಸಿ ‘ಶೇಕ್ ಉಮುಲ್ ಖೈರ್’ ಎಂದು ಹೆಸರು ಬದಲಾಯಿಸಲಾಗಿತ್ತು. ಪತಿ ತನಗೆ ಮಾತ್ರವಲ್ಲದೆ ಇತರ ಐದು ಹಿಂದೂ ಮಹಿಳೆಯರನ್ನು ಮೋಸದಿಂದ ಬಲೆಗೆ ಬೀಳಿಸಿ ಅವರೊಂದಿಗೆ ಜೀವನ ನಡೆಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಹತ್ತು ಪ್ರಕರಣಗಳು ಮತಾಂತರದ ಒತ್ತಡ, ಗುರುತು ಮುಚ್ಚಿಟ್ಟು ವಂಚನೆ, ಅಪಹರಣ, ಲೈಂಗಿಕ ಶೋಷಣೆ, ಬ್ಲ್ಯಾಕ್ಮೇಲ್ ಮತ್ತು ಅಕ್ರಮ ಮತಾಂತರ ಜಾಲಗಳಂತಹ ಗಂಭೀರ ಸ್ವರೂಪದ ಆರೋಪಗಳನ್ನು ಒಳಗೊಂಡಿವೆ. ಇವುಗಳ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳು ಪ್ರಸ್ತುತ ಮುಂದುವರಿದಿವೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
