ಕಲಬುರಗಿ, ಅ. 4: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಷ್ಟಗ ಗ್ರಾಮದ ಕನಕ ಭವನದಲ್ಲಿ ಅ. 4ರಂದು ಹಾಲುಮತ ಪುರಾಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಷ.ಬ್ರ. ನಿಜಲಿಂಗ ಶಿವಾಚಾರ್ಯರು (ಅಷ್ಟಗಾ), ಶರಣ ಪೂಜ್ಯ ಶ್ರೀ ನಿಂಗಪ್ಪ ಮುತ್ಯಾ ಅವರಾದ ಹಾಗೂ ಶರಣ ಶ್ರೀ ಅಂಬರೀಷ್ ಮುತ್ಯಾ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಯುವ ನಾಯಕ ಶ್ರೀ ಗೊರಖನಾಥ ಶಾಖಾಪುರ್, ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾಧ್ಯಕ್ಷ ಶ್ರೀ ಭಗವಂತರಾಯ ಪಾಟೀಲ್, ಹಿರಿಯರು ಹಾಗೂ ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀ ಶರಣಬಸಪ್ಪ ಪಾಟೀಲ್, ಕಲಬುರಗಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಶ್ರೀ ಶಿವಕುಮಾರ್ ಪಾಟೀಲ್ ಜಂಬಗ, ಎಪಿಎಂಸಿ ನಿರ್ದೇಶಕ ಶ್ರೀ ನಾಗೇಶ ಮುಚಖೆಡ, ಕೋಮರಾಮ್ ಭೀಮ್ ಗೊಂಡ ಕುರುಬ ಸಂಘ (ರಿ.), ಕಲಬುರಗಿ ಜಿಲ್ಲಾಧ್ಯಕ್ಷ ಶ್ರೀ ಬಸವರಾಜ ಮದ್ರಿಕಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
