ವಿಶ್ವಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಅಶೋಕ್ ಸಿಂಘಾಲ್ ಜನ್ಮಶತಮಾನೋತ್ಸವ ಉದ್ಘಾಟನೆ
ಬೆಂಗಳೂರು: “ಹಿಂದೂ ಸಮಾಜದಲ್ಲಿನ ಮೇಲು-ಕೀಳು ಭಾವನೆ ಹಾಗೂ ಅಸ್ಪೃಶ್ಯತೆಯನ್ನು ತೊಲಗಿಸಿ, ಅಖಂಡ ಸಮಾಜವನ್ನು ಸಂಘಟಿಸುವಲ್ಲಿ ವಿಶ್ವ ಹಿಂದೂ ಪರಿಷತ್ತಿನ ಹಿರಿಯ ನಾಯಕ ದಿವಂಗತ ಅಶೋಕ್ ಸಿಂಘಾಲ್ ಅವರ ಕೊಡುಗೆ ಅನನ್ಯವಾದದ್ದು” ಎಂದು ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅಶೋಕ್ ಸಿಂಘಾಲ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಿಂಘಾಲ್ ಅವರೊಂದಿಗಿನ ತಮ್ಮ ಸುದೀರ್ಘ ಒಡನಾಟ ಹಾಗೂ ರಾಮಜನ್ಮಭೂಮಿ ಚಳವಳಿಯ ದಿನಗಳನ್ನು ಮೆಲಕುಹಾಕಿದರು.
ಸಮಾನತೆಯ ಸಂದೇಶ: 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರು ಸಾರಿದ ‘ಇವನಾರವ ಇವನಾರವ ಎನ್ನದೆ ಇವ ನಮ್ಮವನೆನ್ನಿ’ ಎಂಬ ತತ್ತ್ವ ಹಾಗೂ ಉಡುಪಿಯ ಹಿಂದೂ ಮಹಾ ಸಮ್ಮೇಳನದಲ್ಲಿ ಸ್ವೀಕರಿಸಲಾದ ‘ಸಮಾನತೆ’ಯ ಧ್ವೇಯ ವಾಕ್ಯಗಳು ಸಮಾಜದ ಏಕತೆಗೆ ಅಡಿಪಾಯವಾಗಿವೆ.
ರಾಮಜನ್ಮಭೂಮಿ ಹೋರಾಟದ ಹಾದಿ: 1984ರಲ್ಲಿ ಶ್ರೀ ಮಹಂತ್ ಅವೈದ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಅಶೋಕ್ ಸಿಂಘಾಲ್ ಅವರ ಕಾರ್ಯನಿರ್ವಹಣೆಯಲ್ಲಿ ಆರಂಭವಾದ ‘ರಾಮಜನ್ಮಭೂಮಿ ಮುಕ್ತಿ ಯಜ್ಞ ಸಮಿತಿ’ಯ ಜನಾಂದೋಲನವು ಇಡೀ ದೇಶದ ಅಸ್ಮಿತೆಯನ್ನು ಜಾಗೃತಗೊಳಿಸಿತು.
ಸಾಮಾಜಿಕ ಸಾಮರಸ್ಯ: ಅಯೋಧ್ಯೆಯಲ್ಲಿ ಶಿಲಾನ್ಯಾಸದ ವೇಳೆ ದಲಿತ ಬಂಧು (ಕಾಮೇಶ್ವರ್ ಚೌಪಾಲ್) ಅವರಿಂದ ಶಿಲಾನ್ಯಾಸ ಮಾಡಿಸಿದ್ದು ಸಮಾಜಕ್ಕೆ ಸಾಮರಸ್ಯದ ದೊಡ್ಡ ಸಂದೇಶವಾಗಿತ್ತು.
ಸಿಖ್ ಸಮುದಾಯದೊಂದಿಗೆ ಸಂಧಾನ (ಸದ್ಭಾವನಾ ಯಾತ್ರೆ): ಪಂಜಾಬ್ನಲ್ಲಿ ಉದ್ವಿಗ್ನತೆ ಉಂಟಾಗಿದ್ದ ಸಂದರ್ಭದಲ್ಲಿ ಅಶೋಕ್ ಸಿಂಘಾಲ್, ಪೇಜಾವರ ಶ್ರೀಗಳು ಹಾಗೂ ತಾವು ಹರಿದ್ವಾರದಿಂದ ಅಮೃತಸರದವರೆಗೆ ಕೈಗೊಂಡ ‘ಸದ್ಭಾವನಾ ಯಾತ್ರೆ’ಯ ನೆನಪುಗಳನ್ನು ಹಂಚಿಕೊಂಡ ಶ್ರೀಗಳು, ಸಿಖ್ ಧರ್ಮಗುರುಗಳೊಂದಿಗೆ ಮಾತನಾಡಿ ಶಾಂತಿ ಸ್ಥಾಪನೆಗೆ ಶ್ರಮಿಸಿದ್ದನ್ನು ಸ್ಮರಿಸಿದರು.
’ರಿಲ್ಯಾಕ್ಸ್ ಮೋಡ್ಗೆ ಹೋಗದಿರಿ’:
“ಹೋರಾಟ ಮುಗಿದ ತಕ್ಷಣ ಸಮಾಜ ‘ರಿಲ್ಯಾಕ್ಸ್ ಮೋಡ್’ಗೆ ಜಾರುವುದು ಸರಿಯಲ್ಲ. ಮಂದಿರ ನಿರ್ಮಾಣದಂತಹ ಕಾರ್ಯಗಳ ನಂತರವೂ ನಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಕಾಯ್ದುಕೊಂಡು ಹೋಗುವುದು ಹೋರಾಟಕ್ಕಿಂತ ಕಠಿಣವಾದದ್ದು. ಈ ಹಾದಿಯಲ್ಲಿ ಅಶೋಕ್ ಸಿಂಘಾಲ್ ಅವರ ಬದ್ಧತೆ ಮತ್ತು ದೀರ್ಘ ಚಿಂತನೆ ನಮಗೆಲ್ಲರಿಗೂ ಸದಾ ಸ್ಪೂರ್ತಿಯಾಗಿರಬೇಕು,” ಎಂದು ಶ್ರೀ ಶಿವರುದ್ರ ಸ್ವಾಮೀಜಿ ಕರೆ ನೀಡಿದರು.
ಸಾಮರಸ್ಯಕ್ಕೆ ಸಿಂಘಾಲ್ ಕೊಡುಗೆ: ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಸ್ಮರಣೆ

ಹಿಂದೂ ಸಮಾಜವನ್ನು ಒಗ್ಗೂಡಿಸುವಲ್ಲಿ ಅವರ ಪಾತ್ರ ಹಾಗೂ ಧರ್ಮದ ಉಳಿವಿಗಾಗಿ ಅವರು ನಡೆಸಿದ ಹೋರಾಟವನ್ನು ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಸ್ಮರಿಸಿದರು.
ಸಿಂಘಾಲ್ ಅವರ ತ್ಯಾಗ ಮತ್ತು ಆದರ್ಶ: ಅಶೋಕ್ ಸಿಂಘಾಲ್ ಅವರು ದೇಶ ಮತ್ತು ಧರ್ಮಕ್ಕಾಗಿ ಮಾಡಿದ ತ್ಯಾಗ ಹಾಗೂ ಹೋರಾಟದ ಜೀವನವನ್ನು ಸ್ಮರಿಸಿದ ಸ್ವಾಮೀಜಿಗಳು, ಅವರ ಕನಸಿನಂತೆ ಧರ್ಮವನ್ನು ಕಟ್ಟುವುದು ಮತ್ತು ಸಮಾಜವನ್ನು ಬಲಪಡಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯ: ಕೇವಲ ಬಾಹ್ಯವಾಗಿ ಜೈ ಶ್ರೀರಾಮ್ ಘೋಷಣೆ ಕೂಗುವುದಷ್ಟೇ ಅಲ್ಲದೆ, ಅರ್ಧ ಶತಮಾನದ ಹಿಂದೆಯೇ ಉಚ್ಚ-ನೀಚ ಎನ್ನುವ ಮೇಲು-ಕೀಳು ಭಾವನೆಯನ್ನು ತೊಡೆದುಹಾಕಲು ಸಿಂಘಾಲ್ ಅವರು ಮಠಾಧೀಶರನ್ನು ಒಂದೇ ವೇದಿಕೆಗೆ ತರುವ ಮೂಲಕ ಸಮಾನತೆಯ ಸಂದೇಶ ಸಾರಿದ್ದರು ಎಂದು ತಿಳಿಸಿದರು.
ಚಿತ್ರದುರ್ಗದ ರಥಯಾತ್ರೆ ಹಾಗೂ ಮುರುಘಾ ಮಠದ ಕೊಡುಗೆ: 1989ರ ರಾಮಮಂದಿರ ರಥಯಾತ್ರೆಯ ಸಂದರ್ಭದಲ್ಲಿ ಅಂದಿನ ಮುರುಘಾ ಮಠದ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು ರಥಯಾತ್ರೆಯನ್ನು ಸ್ವಾಗತಿಸಿದ್ದನ್ನು ಮತ್ತು “ರಾಮಮಂದಿರ ಪಾಕಿಸ್ತಾನದಲ್ಲಿ ಕಟ್ಟಲು ಸಾಧ್ಯವೇ?” ಎಂದು ನೀಡಿದ್ದ ಐತಿಹಾಸಿಕ ಗಂಭೀರ ನುಡಿಗಳನ್ನು ಸ್ವಾಮೀಜಿಗಳು ನೆನಪಿಸಿಕೊಂಡರು.
ಮತಾಂತರ ತಡೆ ಹಾಗೂ ಹಿಂದೂ ಧರ್ಮದ ಜಾಗೃತಿ: ಸಂಘದ ಮಾರ್ಗದರ್ಶನದಲ್ಲಿ ಶೋಷಿತ ಹಾಗೂ ಹಿಂದುಳಿದ ಸಮುದಾಯಗಳಲ್ಲಿ ಮತಾಂತರವನ್ನು ತಡೆಯುವಲ್ಲಿ ಹಾಗೂ ಅವರನ್ನು ಹಿಂದೂ ಧರ್ಮದ ಮುಖ್ಯವಾಹಿನಿಯಲ್ಲಿ ಗಟ್ಟಿಯಾಗಿ ಉಳಿಸುವಲ್ಲಿ ಮಠದಿಂದ ಕೈಗೊಂಡಿರುವ ಪ್ರಾಮಾಣಿಕ ಪ್ರಯತ್ನಗಳ ಬಗ್ಗೆ ವಿವರಿಸಿದರು.
ಚಂಪತರಾಯರ ಸರಳತೆ: ರಾಮಮಂದಿರ ಭೂಮಿಪೂಜೆ ಸಂದರ್ಭದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ್ ಅವರನ್ನು ಭೇಟಿ ಮಾಡಿದ್ದನ್ನು ಸ್ಮರಿಸಿದ ಸ್ವಾಮೀಜಿಗಳು, ಅಷ್ಟು ದೊಡ್ಡ ಜವಾಬ್ದಾರಿಯಲ್ಲಿದ್ದರೂ ಅವರು ಅತ್ಯಂತ ಸರಳ ಹಾಗೂ ಸಜ್ಜನಿಕೆಯ ಜೀವನ ನಡೆಸುತ್ತಿರುವುದು ಎಲ್ಲರಿಗೂ ಮಾದರಿ ಎಂದು ಪ್ರಶಂಸಿಸಿದರು.
ಈ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಉಚ್ಚ ನ್ಯಾಯಾಧೀಶರಾದ ಶ್ರೀಧರ ರಾವ್ ವಹಿಸಿದ್ದರು. ವೇದಿಕೆಯಲ್ಲಿ ವಿಹೆಚ್ಪಿ ಹಿರಿಯ ನಾಯಕ ಚಂಪತ್ ರಾಯ್, ಮಾದಾರ ಚೆನ್ನಯ್ಯ ಪೀಠದ ಪೂಜ್ಯ ಶ್ರೀಗಳು ಹಾಗೂ ಆರ್ಎಸ್ಎಸ್ ಅಖಿಲ ಭಾರತ ಸಹಬೌದ್ಧಿಕ ಪ್ರಮುಖರಾದ ಸುಧೀರ್ ಅವರು ಉಪಸ್ಥಿತರಿದ್ದರು.
ಮತಾಂತರ ತಡೆ ಹಾಗೂ ಹಿಂದೂ ಧರ್ಮದ ಜಾಗೃತಿ: ಸಂಘದ ಮಾರ್ಗದರ್ಶನದಲ್ಲಿ ಶೋಷಿತ ಹಾಗೂ ಹಿಂದುಳಿದ ಸಮುದಾಯಗಳಲ್ಲಿ ಮತಾಂತರವನ್ನು ತಡೆಯುವಲ್ಲಿ ಹಾಗೂ ಅವರನ್ನು ಹಿಂದೂ ಧರ್ಮದ ಮುಖ್ಯವಾಹಿನಿಯಲ್ಲಿ ಗಟ್ಟಿಯಾಗಿ ಉಳಿಸುವಲ್ಲಿ ಮಠದಿಂದ ಕೈಗೊಂಡಿರುವ ಪ್ರಾಮಾಣಿಕ ಪ್ರಯತ್ನಗಳ ಬಗ್ಗೆ ವಿವರಿಸಿದರು.
ಚಂಪತರಾಯರ ಸರಳತೆ: ರಾಮಮಂದಿರ ಭೂಮಿಪೂಜೆ ಸಂದರ್ಭದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ್ ಅವರನ್ನು ಭೇಟಿ ಮಾಡಿದ್ದನ್ನು ಸ್ಮರಿಸಿದ ಸ್ವಾಮೀಜಿಗಳು, ಅಷ್ಟು ದೊಡ್ಡ ಜವಾಬ್ದಾರಿಯಲ್ಲಿದ್ದರೂ ಅವರು ಅತ್ಯಂತ ಸರಳ ಹಾಗೂ ಸಜ್ಜನಿಕೆಯ ಜೀವನ ನಡೆಸುತ್ತಿರುವುದು ಎಲ್ಲರಿಗೂ ಮಾದರಿ ಎಂದು ಪ್ರಶಂಸಿಸಿದರು.
ಸಮಾರಂಭದಲ್ಲಿ ರಾಮಮಂದಿರ ಚಳವಳಿಯ ಹಿರಿಯರಾದ ಚಂಪತ್ ರಾಯ್, ಸುಧೀರ್ ಜೀ ಸೇರಿದಂತೆ ಸಂಘದ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಅದಿತಿ ಅವರು ವೈಯಕ್ತಿಕ ಗೀತೆಯನ್ನು ಪ್ರಸ್ತುತಪಡಿಸಿ ಸಭೆಗೆ ಸ್ಫೂರ್ತಿ ತುಂಬಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
