- ವಿಧಾನ ಪರಿಷತ್ ಭರ್ಜರಿ ಗೆಲುವಿಗೆ ಸಚಿವ ಜೋಶಿ ಘೋಷವಾಕ್ಯ
- ದೇಶದ 28 ಕ್ಷೇತ್ರಗಳಲ್ಲೂ ಹೇಳ ಹೆಸರಿಲ್ಲದಾದ ಕಾಂಗ್ರೆಸ್
- ಆಡಳಿತಾರೂಢ ಕರ್ನಾಟಕದಲ್ಲೂ ಧೂಳೀಪಟ; ಆತ್ಮಾವಲೋಕನ ಮಾಡಿಕೊಳ್ಳಲಿ
ನವದೆಹಲಿ: “ದೇಶದ ಶ್ರೇಷ್ಠ ಸಂವಿಧಾನ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂ ಇರಲಿ, ಬ್ಯಾಲೆಟ್ ಪೇಪರ್ರೇ.. ಬರಲಿ ಗೆಲುವು ಮಾತ್ರ ನಮ್ಡೇ..!”
ಕಾಂಗ್ರೆಸ್ ನ ವೋಟ್ ಚೋರಿ, SIR ಆರೋಪದ ನಡುವೆಯೂ ದೇಶದೆಲ್ಲೆಡೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದರ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಹೀಗೆ ಘೋಷ ವಾಕ್ಯ ಮೊಳಗಿಸಿದ್ದಾರೆ.
ದೇಶದ ಎಲ್ಲೇ ಆಗಲಿ ಚುನಾವಣಾ ವ್ಯವಸ್ಥೆಯಲ್ಲಿ ಮತದಾನಕ್ಕೆ ಇವಿಎಂ ಬಳಸಲಿ ಅಥವಾ ಬ್ಯಾಲೆಟ್ ಪೇಪರ್ ಅನ್ನೇ ಬಳಸಲಿ ಫಲಿತಾಂಶ ಮಾತ್ರ ಒಂದೇ ಆಗಿರುತ್ತದೆ ಅದು ಬಿಜೆಪಿ ನೇತೃತ್ವದ NDA ಗೆಲುವು ! ಎಂದು ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ.
ಈ ಬಾರಿ ದೇಶಾದ್ಯಂತ ನಡೆದ 28 ಎಂಎಲ್ಸಿ ಕ್ಷೇತ್ರಗಳ ಪೈಕಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದೆ ಕಾಂಗ್ರೆಸ್ ಸಂಪೂರ್ಣ ಧೂಳಿಪಟವಾಗಿದೆ. ಇದಕ್ಕೆ ಆ ಪಕ್ಷದ ನೇತಾರರ ನಡವಳಿಕೆಗಳೇ ಕಾರಣ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸದಾ ‘ವೋಟ್ ಚೋರಿ’ ಎಂಬ ಸುಳ್ಳು ಕಥೆ ಸೃಷ್ಟಿಸುತ್ತಾ ತನ್ನ ಅವನತಿ ತಾನೇ ತಂದುಕೊಳ್ಳುತ್ತಿದೆ. ಸಾಂವಿಧಾನಿಕ ಹುದ್ದೆಗಳ ಮೇಲೆ ಅಪಂಬಿಕೆ, ಅಗೌರವ ತೋರಿದ್ದಲ್ದದೇ, ಚುನಾವಣಾ ಆಯೋಗವನ್ನೇ ದೂರುತ್ತಿತ್ತು. ಶ್ರೇಷ್ಠ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಲ್ಲಗಳೆಯುವ ರೀತಿ ವಿರೋಧಾಭಾಸ ವ್ಯಕ್ತಪಡಿಸುತ್ತಿತ್ತು. ಇದಕ್ಕೆಲ್ಲ ಈಗ ಸ್ಪಷ್ಟ ಉತ್ತರ ಸಿಕ್ಕಿದೆ ಎಂದು ಹೇಳಿದ್ದಾರೆ ಜೋಶಿ.
ಡಾ.ಅಂಬೇಡ್ಕರ್ ಅವರ ಸಂವಿಧಾನವನ್ನೇ ಪ್ರಶ್ನಿಸುವ ರೀತಿ ವರ್ತಿಸುತ್ತಿದ್ದ ಕಾಂಗ್ರೆಸ್ ಪಕ್ಷ ಇದೀಗ ದೇಶದೆಲ್ಲೆಡೆ 28 ಕ್ಷೇತ್ರಗಳಲ್ಲಿ ಒಂದೇ ಒಂದು ಸೀಟನ್ನೂ ಗೆಲ್ಲಲು ಶಕ್ತವಾಗಿದೆ ಸೋಲಿಗೆ ಶರಣಾಗಿದೆ ಎಂದಿದ್ದಾರೆ.
ಆಡಳಿತಾರೂಢ ಕರ್ನಾಟಕದಲ್ಲೂ ನೆಲಕಚ್ಚಿದೆ: ಇನ್ನು, ಸದ್ಯ ಆಡಳಿತದಲ್ಲಿರುವ ಕರ್ನಾಟಕದಲ್ಲೂ ಅಷ್ಟೇ ಕತೆ. ಹಾಲಿ ಸದಸ್ಯರಿದ್ದ ಸ್ಥಾನವನ್ನೇ ಕಳೆದುಕೊಂಡಿದೆ. ಪದೇ ಪದೇ ಇವಿಎಂ ಬಗ್ಗೆ ಅಪಸ್ವರ ಎತ್ತುತ್ತಿತ್ತು. ಕೊನೆಗೆ ಆ ಪಕ್ಷದ ನಾಯಕರ ಒತ್ತಾಸೆಯಂತೆ ಬ್ಯಾಲೆಟ್ ಪೇಪರ್ ಅನ್ನೇ ಬಳಸಿ ಚುನಾವಣೆ ನಡೆಸಿದರೂ ಫಲಿತಾಂಶ ಮಾತ್ರ ಬದಲಾಗಿಲ್ಲ. ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಬಿಜೆಪಿ ನಿರಾಯಾಸವಾಗಿ ಭರ್ಜರಿ ಜಯ ಸಾಧಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ ಅನ್ನು ಕುಟುಕಿದ್ದಾರೆ.
ದೂಷಿಸುವುದೇ ಕಾಂಗ್ರೆಸ್ ಚಟ:
ಚುನಾವಣಾ ಫಲಿತಾಂಶ ಬಂದಾಗಲೆಲ್ಲಾ ವ್ಯವಸ್ಥೆಯನ್ನು ಪದೇ ಪದೇ ದೂಷಿಸುವುದು ಕಾಂಗ್ರೆಸ್ ಗೆ ಒಂದು ಚಟವಾಗಿಬಿಟ್ಟಿದೆ. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಆದರೆ, ಜನಾದೇಶ ಮಾತ್ರ ಸ್ಪಷ್ಟವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.
ವೃಥಾ ಆರೋಪ ಬಿಟ್ಟು ಆತ್ಮಾವಲೋಕನ ಮಾಡಿಕೊಳ್ಳಲಿ:
ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಟೀಂ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ವೃಥಾ ಆರೋಪ ಮಾಡುವುದನ್ನು ಬಿಟ್ಟು, ತಮ್ಮ ಸಾಲು ಸಾಲು ಸೋಲುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿವಿಮಾತು ಹೇಳಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
