ತುಮಕೂರು: ಶ್ರೀ ಪ್ರಮುಖ್ ಸಾಗರ್ ಮಹಾರಾಜ್ ಜೀ ಅವರು ತುಮಕೂರಿನಲ್ಲಿ ನಡೆಯುವ ಚಾತುರ್ಮಾಸದ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ತುಮಕೂರು ವಿಭಾಗ ಕಾರ್ಯಾಲಯ ಸಾಧನಗೆ ಭೇಟಿ ನೀಡಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಎಲ್ಲರಿಗೂ ಆಶೀರ್ವದಿಸಿದರು.
ಸಂಘದ ಮಾನ್ಯ ವಿಭಾಗ ಸಂಘಚಾಲಕರಾದ ಶ್ರೀ ನಾಗೇಂದ್ರ ಪ್ರಸಾದ್ ಅವರು ಮತ್ತು ನಗರದ ಮಾನ್ಯ ಸಂಘಚಾಲಕರಾದ ಶ್ರೀ ಪ್ರಭುಬಾಳಯ್ಯ ಅವರು ಪಾದಪೂಜೆ ಮಾಡಿ ಸ್ವಾಗತಿಸಿದರು.
ಈ ವಿಶೇಷ ಸಂದರ್ಭದಲ್ಲಿ ನರಸಿಂಹರಾಜಪುರದ ಪೀಠಾಧಿಪತಿಗಳಾದ ಶ್ರೀ ಲಕ್ಷ್ಮಿಸೇನಾ ಭಟ್ಟರಕ ಸ್ವಾಮೀಜಿಗಳು ಮತ್ತು ಪೂಜ್ಯ ಮಾತಾಜಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿದರು.
