ಡೆಹ್ರಾಡೂನ್: ಧಾರ್ಮಿಕ ಹಾಗೂ ಪ್ರಶಾಂತ ತಾಣವೆಂದು ಕರೆಯಲ್ಪಡುವ ‘ದೇವಭೂಮಿ’ ಉತ್ತರಾಖಂಡದಲ್ಲಿ ವಾರ್ಷಿಕ ಸುಮಾರು ₹1,000 ಕೋಟಿ ಮೌಲ್ಯದ ಬೃಹತ್ ವಿದ್ಯುತ್ ಕಳವು (Power Theft) ನಡೆಯುತ್ತಿರುವುದು ಇಲಾಖೆಯ ತನಿಖೆಯಿಂದ ಬಹಿರಂಗಗೊಂಡಿದೆ. ವಿಶೇಷವೆಂದರೆ, ಈ ಒಟ್ಟು ನಷ್ಟದ ಪೈಕಿ ಸುಮಾರು ₹800 ಕೋಟಿಗಳಷ್ಟು ವಿದ್ಯುತ್ ಕಳವು ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿಯೇ ಹೆಚ್ಚಾಗಿ ನಡೆಯುತ್ತಿದೆ ಎಂದು ಇಲಾಖೆಯ ಸಮೀಕ್ಷೆ ಹಾಗೂ ತನಿಖಾ ವರದಿಗಳು ಎತ್ತಿ ತೋರಿಸಿವೆ.
ಹರಿದ್ವಾರ ಮತ್ತು ರೂರ್ಕಿಯಲ್ಲಿ ಗರಿಷ್ಠ ವಿದ್ಯುತ್ ನಷ್ಟ:
ರಾಜ್ಯದ ಹರಿದ್ವಾರ ಜಿಲ್ಲೆಯ ರೂರ್ಕಿ ವೃತ್ತದಲ್ಲಿ (Roorkee Circle) ಮಾತ್ರ ಸುಮಾರು 900 ಮಿಲಿಯನ್ ಯೂನಿಟ್ಗಳಷ್ಟು ಅತಿಹೆಚ್ಚು ವಿದ್ಯುತ್ ನಷ್ಟ (Power Loss) ಸಂಭವಿಸುತ್ತಿದೆ ಎಂದು ವರದಿ ತಿಳಿಸಿದೆ. ಇದರ ಆರ್ಥಿಕ ಮೌಲ್ಯ ₹500 ಕೋಟಿಗಳಿಗೂ ಅಧಿಕವಾಗಿದೆ. ಈ ಪ್ರದೇಶದ ಕೆಲವು ಕಡೆಗಳಲ್ಲಿ ವಿದ್ಯುತ್ ನಷ್ಟವು ಶೇ. 80ರಷ್ಟು ಮುಟ್ಟಿದೆ. ಇಲ್ಲಿನ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ವಿದ್ಯುತ್ ಕಳವು ಮತ್ತು ಕಾನೂನುಬಾಹಿರ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ.
ಇತರ ಪ್ರದೇಶಗಳ ಮೇಲೂ ಆರ್ಥಿಕ ಹೊರೆ:
ಉತ್ತರಾಖಂಡದಲ್ಲಿ ಕೇವಲ ಎಂಟು ನಗರಗಳ ಎಟಿ ಮತ್ತು ಸಿ (AT&C) ನಷ್ಟವು ರಾಜ್ಯದ ಇತರೆ 114 ನಗರಗಳ ಮೇಲೆಯೂ ತೀವ್ರ ಪರಿಣಾಮ ಬೀರುತ್ತಿದೆ. ಈ ಬೆರಳೆಣಿಕೆಯ ನಗರಗಳಲ್ಲಿನ ಅತಿಹೆಚ್ಚು ವಿದ್ಯುತ್ ವಿತರಣಾ ನಷ್ಟದಿಂದಾಗಿ, ಇಡೀ ಉತ್ತರಾಖಂಡದ ಜನತೆ ದುಬಾರಿ ಬೆಲೆಗೆ ವಿದ್ಯುತ್ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ರಾಜ್ಯದಲ್ಲಿ ಒಟ್ಟು 46 ವಿದ್ಯುತ್ ವಿಭಾಗಗಳು (Divisions) ಇದ್ದು, ಇವುಗಳಲ್ಲಿ 19 ಪರ್ವತ ಪ್ರದೇಶಗಳಲ್ಲಿ ಮತ್ತು 27 ಮೈದಾನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಈ ನಷ್ಟವನ್ನು ತಪ್ಪಿಸಲು ನಿಯಂತ್ರಣ ಆಯೋಗವು (Regulatory Commission) ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ಎನರ್ಜಿ ಆಡಿಟ್ (Energy Audit) ಖಚಿತಪಡಿಸಿಕೊಳ್ಳುವಂತೆ ಇಲಾಖೆಗೆ ನಿರ್ದೇಶನ ನೀಡಿದೆ.
ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಕಳವು ಮತ್ತು ಅಧಿಕಾರಿಗಳ ಮೇಲಿನ ದಾಳಿ:
ಇಲಾಖೆಯ ವರದಿಗಳ ಪ್ರಕಾರ ಗದರ್ಪುರದಲ್ಲಿ ಶೇ. 30.58, ಜಸ್ಪುರ್ ಶೇ. 27, ಖಟಿಮಾ ಶೇ. 53, ಲಕ್ಸರ್ ಶೇ. 27, ಲಂಥೌರಾ ಶೇ. 69.40, ಮಂಗಲೌರ್ ಶೇ. 47.62 ಮತ್ತು ಸೀತಾರಂಗಂನಲ್ಲಿ ಶೇ. 27.25 ರಷ್ಟು ಲೈನ್ ಲಾಸ್ (Line Loss) ದಾಖಲಾಗಿದೆ.
ವಿದ್ಯುತ್ ಇಲಾಖೆಯು ಈ ಪ್ರದೇಶಗಳಲ್ಲಿ ಕಳವು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾದಾಗಲೆಲ್ಲಾ, ನಿರ್ದಿಷ್ಟ ಸಮುದಾಯದ ಸಂಘಟಿತ ಗುಂಪುಗಳು ಇಲಾಖೆಯ ಸಿಬ್ಬಂದಿ ಹಾಗೂ ತಂಡಗಳ ಮೇಲೆ ದಾಳಿ ನಡೆಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಠಿಣ ಎಚ್ಚರಿಕೆ:
ವಿದ್ಯುತ್ ಕಳವನ್ನು ತಡೆಯುವುದು ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಪಷ್ಟಪಡಿಸಿದ್ದಾರೆ. ಕೋಟ್ಯಂತರ ರೂಪಾಯಿಗಳ ಈ ನಷ್ಟವು ಸರ್ಕಾರದ ಮೇಲೆ ಹಾಗೂ ಸಾಮಾನ್ಯ ಗ್ರಾಹಕರ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಬೀರುತ್ತಿದೆ. ಇದನ್ನು ತಡೆಯಲು ಯಾವುದೇ ಮುಕದಾಮೆಗೆಂಜದೆ ಕಠಿಣ ಕ್ರಮ ಜರುಗಿಸಲಾಗುವುದು ಹಾಗೂ ಅಗತ್ಯ ಬಿದ್ದರೆ ಬಲಪ್ರಯೋಗಿಸಲಾಗುವುದು ಎಂದು ಸಿಎಂ ಧಾಮಿ ಎಚ್ಚರಿಕೆ ನೀಡಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
