ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕರ್ತರು ಹಾಗೂ ‘ವಿಕ್ರಮ’ ವಾರಪತ್ರಿಕೆಯ ಕಿತ್ತೂರು ಕರ್ನಾಟಕದ ಪ್ರಸರಣ ವಿಭಾಗದ ಸಹಕಾರಿಯಾಗಿದ್ದ ಶ್ರೀ ಹರ್ಷವರ್ಧನ್ (38) ಅವರು ಹಠಾತ್ ನಿಧನರಾಗಿದ್ದಾರೆ. ಅವರ ಅಕಾಲಿಕ ಅಗಲಿಕೆಯು ತೀವ್ರ ಆಘಾತವನ್ನುಂಟು ಮಾಡಿದೆ.
ಮೃತರಾದ ಶ್ರೀ ಹರ್ಷವರ್ಧನ್ ಅವರು ರಾಷ್ಟ್ರಚಿಂತನೆ ಮತ್ತು ಪತ್ರಿಕಾರಂಗದ ಸದಾಶಯಗಳಿಗೆ ಸದಾ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದರು. ಪತ್ರಿಕಾ ರಂಗಕ್ಕೆ ಹಾಗೂ ಸಂಘಟನಾ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಅನನ್ಯ ಹಾಗೂ ಅಪಾರವಾದದ್ದು. ಇವರ ಹಠಾತ್ ಅಗಲಿಕೆಯಿಂದ ರಾಷ್ಟ್ರೀಯ ಚಿಂತನಾ ವಲಯ ಹಾಗೂ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಅವರ ನಿಧನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರ ಮಾಧ್ಯಮ ಸಲಹೆಗಾರ ಚಂದ್ರಶೇಖರ ಬೆಳವಾಡಿ ಸೇರಿದಂತೆ ಅನೇಕ ಗಣ್ಯರು, ಹಿತೈಷಿಗಳು ಹಾಗೂ ಸಂಘಟನೆಯ ಪ್ರಮುಖರು ತೀವ್ರ ಸಂತಾಪ ಸೂಚಿಸಿದ್ದಾರೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಈ ತೀವ್ರ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೂ ಮತ್ತು ಸಕಲ ಹಿತೈಷಿಗಳಿಗೂ ಕರುಣಿಸಲಿ ಎಂದು ವಿಕ್ರಮ ಬಳಗ ಪ್ರಾರ್ಥಿಸುತ್ತದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
