ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ವಿಭಾಗದ ಆಯಾಮವಾಗಿರುವ ಮಾಧ್ಯಮ ಸಂವಹನ ಸಂಸ್ಥೆ ‘ವಿಶ್ವ ಸಂವಾದ ಕೇಂದ್ರ ಕರ್ನಾಟಕ’ದ ನೂತನ ಕಚೇರಿಯು ಚಾಮರಾಜಪೇಟೆಯ 5ನೇ ಮುಖ್ಯರಸ್ತೆಯಲ್ಲಿರುವ ವಿಕ್ರಮ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಇಂದಿನಿಂದ ಪ್ರಾರಂಭಗೊಂಡಿದೆ.
ಕಚೇರಿಯ ಶ್ರೀಗಣೇಶಮೂರ್ತಿ ಹಾಗೂ ಭಾರತಮಾತೆಯ ಭಾವಚಿತ್ರದ ಮುಂದೆ ದೀಪಪ್ರಜ್ವಲನೆಯೊಂದಿಗೆ ಕಚೇರಿ ಕಾರ್ಯಚಟುವಟಿಕೆಗಳು ಪ್ರಾರಂಭಗೊಂಡಿತು.

ಈ ಸಂದರ್ಭದಲ್ಲಿ ವಿಶ್ವ ಸಂವಾದ ಕೇಂದ್ರ ಕರ್ನಾಟಕದ ಟ್ರಸ್ಟಿಗಳಾದ ಸತ್ಯನಾರಾಯಣ ಶಾನಭಾಗ, ರಾಧಾಕೃಷ್ಣ ಹೊಳ್ಳ, ಶ್ರೀನಿವಾಸ ಭಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖರಾದ ರಾಜೇಶ್ ಪದ್ಮಾರ್, ಸಂವಾದ ಚಾನೆಲ್ ಸಂಪಾದಕರಾದ ವೃಷಾಂಕ ಭಟ್, ವಿಕ್ರಮ ವಾರಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಕುಳಮರ್ವ, ಪ್ರಾಂತ ಕಾರ್ಯಾಲಯ ಪ್ರಮುಖರಾದ ಶ್ರೀ ಶ್ರೀನಿಧಿ ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
