ಕಿರಣ್ ಕುಮಾರ್ ಎಂಬ ಯುವಕ ತನ್ನ ತಾಯಿಯನ್ನು ಕ್ಯಾನ್ಸರ್ನಿಂದ ಕಳೆದುಕೊಂಡು, ಆ ದುಃಖದಿಂದ ಹೊರಬರಲು ಸ್ನೇಹಿತರೊಡನೆ ಸೇರಿ ‘ಶ್ರೀ ವೃಂದಾವನ ಗೋಶಾಲೆ’ಯನ್ನು ಪ್ರಾರಂಭಿಸಿದರು. ತಾಯಿಯ ಅಗಲಿಕೆಯ ನೋವನ್ನು ಮರೆಯಲು ಗೋಸೇವೆಯಲ್ಲಿ ತಲ್ಲೀನರಾದರು. ಆದರೆ ತನ್ನ ತಾಯಿಯನ್ನು ಬಲಿಪಡೆದ ಕ್ಯಾನ್ಸರ್ ಎಂಬ ಹೆಮ್ಮಾರಿಯನ್ನು ಬೇರೆ ಯಾರೂ ಬಲಿಪಡೆಯಬಾರದು ಮತ್ತು ಅದನ್ನು ಹೇಗಾದರೂ ಮಾಡಿ ದೂರ ಮಾಡಬೇಕೆಂಬ ಛಲದಿಂದ ಸತತ 15 ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡುವ ‘ಪಂಚಗವ್ಯದ ನೀರಿನ ತರ್ಪಣ’ ಎಂಬ ಕ್ಯಾನ್ಸರ್ ನಿರೋಧಕವನ್ನು ಸಂಶೋಧಿಸಿ ಯಶಸ್ವಿಯಾದರು. ಇದರಿಂದ ಕೇವಲ ಕ್ಯಾನ್ಸರ್ ರೋಗ ನಿವಾರಣೆ ಮಾತ್ರವಲ್ಲದೆ, ದೇಶಿ ಗೋಶಾಲೆಗಳಿಗೂ ಆದಾಯದ ಮೂಲವನ್ನು ಸೃಷ್ಟಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಭಾರತದಲ್ಲಿ ಪ್ರತಿವರ್ಷ 14 ಲಕ್ಷಕ್ಕೂ ಹೆಚ್ಚು ಜನರಿಗೆ ಕ್ಯಾನ್ಸರ್ ರೋಗ ಬರುತ್ತಿದ್ದು, 9 ಲಕ್ಷ ಜನರು ಪ್ರತಿವರ್ಷವೂ ಈ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಈ ಸಮಯದಲ್ಲಿ ಆಯುರ್ವೇದ ತಜ್ಞರಾದ ಡಾ. ರೇವತಿ ಹಾಗೂ ಡಾ. ರಮೇಶ್ ಅವರ ಮಾರ್ಗದರ್ಶನದಲ್ಲಿ, ಶ್ರೀ ವೃಂದಾವನ ಗೋಶಾಲೆ ಹಾಗೂ ‘ಜೀವ ಬಯೋಟೆಕ್ನಾಲಜೀ’ ಕಂಪನಿಯ ಸಂಸ್ಥಾಪಕರಾದ ಕಿರಣ್ ಹಾಗೂ ತಂಡದಿಂದ ಸತತ 15 ವರ್ಷಗಳ ಸಂಶೋಧನೆಯ ಪರಿಣಾಮವಾಗಿ, ಪಂಚಗವ್ಯ ಹಾಗೂ ಆಯುರ್ವೇದೀಯ ಔಷಧಿ ಸಸ್ಯಗಳ ಆಧಾರದ ಮೇಲೆ 20ಕ್ಕೂ ಹೆಚ್ಚು ನೈಸರ್ಗಿಕ ಖನಿಜಗಳನ್ನು ಒಳಗೊಂಡ ‘ನ್ಯಾನೋ ತಂತ್ರಜ್ಞಾನದ ಆಲ್ಕಲೈನ್ (ಕ್ಷಾರೀಯ) ನೀರನ್ನು’ ಅಭಿವೃದ್ಧಿಪಡಿಸಲಾಯಿತು.
ಪ್ರಯೋಗಾಲಯ ಮಟ್ಟದಲ್ಲಿ ಈ ಕ್ಷಾರೀಯ ನೀರನ್ನು ಮೆದುಳಿನ ಕ್ಯಾನ್ಸರ್ (U-87 MG) ಮತ್ತು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ (PANC-1) ಕೋಶಗಳ ಮೇಲೆ ಅಲೋಪತಿ ಔಷಧಿಯಾದ ‘ಡಾಕ್ಸೋರುಬಿಸಿನ್’ ಕೀಮೋಥೆರಪಿ ಡ್ರಗ್ ಮಾನದಂಡದೊಂದಿಗೆ ಪರೀಕ್ಷಿಸಲಾಯಿತು. ಈ ಕ್ಷಾರೀಯ ನೀರಿನಿಂದ ‘ಸೈಟೊಟಾಕ್ಸಿಸಿಟಿ’ ಅಂದರೆ ಕ್ಯಾನ್ಸರ್ ಕೋಶಗಳು ಸಾಯುವ ಸೂಚನೆ ಕಂಡುಬಂದಿತು. ಇದರಿಂದ ಪ್ರೇರಿತರಾಗಿ, ಈ ಆಲ್ಕಲೈನ್ ನೀರಿನಿಂದ ಸಾಮಾನ್ಯ ಕೋಶಗಳಿಗೂ ಹಾನಿಯಾಗುವ ಸಾಧ್ಯತೆ ಇದೆಯೇ ಎಂದು ಪರೀಕ್ಷಿಸಿದಾಗ, ಕೀಮೋಥೆರಪಿ ಔಷಧಿಯಿಂದ ಸಾಮಾನ್ಯ ಕೋಶಗಳು ನಾಶವಾಗುತ್ತವೆ ಆದರೆ ನ್ಯಾನೋ ನೀರಿನಿಂದ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ.
ಈ ನ್ಯಾನೋ ನೀರನ್ನು ಮತ್ತಷ್ಟು ಪರೀಕ್ಷಿಸಿದಾಗ, ಇದು ‘ಅಪಾಪ್ಟೋಸಿಸ್’ (Apoptosis) ಎಂಬ ಪ್ರಕ್ರಿಯೆಯ ಮೂಲಕ ಕ್ಯಾನ್ಸರ್ ಕಣಗಳನ್ನು ನಾಶ ಮಾಡುತ್ತದೆ ಎಂದು ತಿಳಿದುಬಂದಿದೆ. ಇದು ದೇಹದ ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು, ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಕ್ಯಾನ್ಸರ್ ರೋಗಿಗಳು ಯಾವ ಪರಿಸ್ಥಿತಿಯಲ್ಲಿದ್ದರೂ ಅದರಿಂದ ಹೊರಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದರೆ, ರಾಸಾಯನಿಕ ಪದ್ಧತಿಯಲ್ಲಿ ಪ್ರಾಥಮಿಕವಾಗಿಯೇ ‘ನೆಕ್ರೋಸಿಸ್’ (Necrosis) ಎಂಬ ಪದ್ಧತಿಯನ್ನು ಅನುಸರಿಸುವುದರಿಂದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ.
ಇದರ ಮುಂದಿನ ಪ್ರಕ್ರಿಯೆಯಲ್ಲಿ ಕ್ಯಾನ್ಸರ್ ಕಣಗಳಿಗೆ ಉಳಿವಿನ ಸಂದೇಶವನ್ನು ಕಡಿತಗೊಳಿಸಲಾಗುತ್ತದೆ. ಇದರಿಂದ ಕ್ಯಾನ್ಸರ್ ಕಣಗಳು ಬೇಗನೆ ನಾಶವಾಗುತ್ತವೆ ಎಂದು ದೃಢಪಟ್ಟಿದೆ. ಈ ನ್ಯಾನೋ ನೀರು ಕೇವಲ ಪ್ಯಾಂಕ್ರಿಯಾಟಿಕ್ ಹಾಗೂ ಮೆದುಳಿನ ಕ್ಯಾನ್ಸರ್ಗೆ ಮಾತ್ರವಲ್ಲದೆ, ಎಲ್ಲಾ ವಿಧವಾದ ಕ್ಯಾನ್ಸರ್ ನಿವಾರಣೆಗೂ ಉಪಯುಕ್ತವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಶೋಧನೆಯು ದೇಶಿ ಗೋವುಗಳ ಉಳಿವಿಗೆ ಒಂದು ಮಹತ್ವದ ಹೆಜ್ಜೆಯಾಗಿದ್ದು, ಇದನ್ನು ಮಹಾನ್ ಗೋಭಕ್ತರಾದ ರಾಜೀವ್ ದೀಕ್ಷಿತ್ ಹಾಗೂ ಎಲ್ಲಾ ಗೋಸೇವಕರಿಗೆ ಸಮರ್ಪಿಸುತ್ತಿದ್ದೇವೆ. ಈ ನೀರಿನ ಸೇವೆಯಿಂದ ಕ್ಯಾನ್ಸರ್ ರೋಗದಿಂದಾಗುವ ಸಾವುಗಳು ಕಡಿಮೆ ಆಗಲಿ ಎಂಬುದು ನಮ್ಮ ಆಶಯವಾಗಿದೆ.
ಇದು ಸ್ವಾಭಾವಿಕವಾದ ನೀರಾಗಿದ್ದು, ನೀರಿನ ಬಣ್ಣ ಮತ್ತು ರುಚಿಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಈ ನ್ಯಾನೋ ನೀರನ್ನು ನಮ್ಮ ಮನೆಯ RO ಯಂತ್ರಕ್ಕೂ ಅಳವಡಿಸಬಹುದಾಗಿದೆ. ಇದು ಇತರ ಆರೋಗ್ಯ ಸಮಸ್ಯೆಗಳಿಗೂ ಉಪಯುಕ್ತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ 08062180742, 7022358862 ಸಂಖ್ಯೆಗಳನ್ನು ಸಂಪರ್ಕಿಸಿ.
- ಅಗ್ನಿಹೋತ್ರಿಲೋಕೇಶ್ ಶರ್ಮಾ
ಲೇಖಕ ಹಾಗೂ ಪತ್ರಕರ್ತ
ಬೆಂಗಳೂರು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
