ಸೃಜನ ಸಾಂಸ್ಕೃತಿಕ ಸಮೂಹ, ಬಸವನಗುಡಿಯ ನ್ಯಾಷನಲ್ ಕಾಲೇಜಿನ ಗಾಂಧಿ-ನೆಹರು ಸಭಾಂಗಣದಲ್ಲಿ 15 ನವೆಂಬರ್ 2026, ಭಾನುವಾರ ಸಂಜೆ 4:30 ಗಂಟೆಗೆ ಆಯೋಜಿಸಿದ್ದ ಸೃಜನದ 25ನೇ ವಾರ್ಷಿಕೋತ್ಸವ, ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಸೃಜನದ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ, ಖ್ಯಾತ ಮೂಳೆ ತಜ್ಞರಾದ ಡಾಕ್ಟರ್ ರಾಜಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸುಗಮ ಸಂಗೀತ ಕ್ಷೇತ್ರದ ಪ್ರಸಿದ್ಧ ಗಾಯಕರು, ಸಂಗೀತ ಸಂಯೋಜಕರು, ಹಿರಿಯ ಸಾಧಕರಾದ ಶ್ರೀಯುತ ಗರ್ತಿಕೆರೆ ರಾಘಣ್ಣ ಅವರಿಗೆ ಸೃಜನದ ಬೆಳ್ಳಿ ಹಬ್ಬದ ಈ ಸುಸಂದರ್ಭದಲ್ಲಿ ‘ಸುಗಮ ಸಂಗೀತ ಸೇವಾ ಧುರಂಧರ’ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.
ಸೃಜನ ಸಂಗೀತ ಶಾಲೆಯ ಹಳೆಯ ವಿದ್ಯಾರ್ಥಿನಿ, ಸಂಗೀತ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ ಮಾಡುತ್ತಿರುವ ಯುವ ಪ್ರತಿಭೆ ಸ್ಪೂರ್ತಿ ರಾವ್ ಅವರಿಗೂ ಗೌರವ ಸನ್ಮಾನವನ್ನು ನೀಡಲಾಯಿತು. ಸ್ಪೂರ್ತಿ ಅವರ ಭಾವಪೂರ್ಣ ಗಾಯನ, ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿತು.
ನಂತರ ಮಾತನಾಡಿದ ಸ್ಪೂರ್ತಿ, ನರಹರಿ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ಕಲಿತ ವಿದ್ಯೆ ಅವಳ ಇಂದಿನ ಸಾಧನೆಗೆ ಭದ್ರ ಬುನಾದಿಯಾಗಿದೆ. ತನ್ನ ಸಂಗೀತದ ಸಾಧನೆಯ ಹಾದಿ ಸೃಜನದಲ್ಲಿಯೇ ಪ್ರಾರಂಭವಾಯಿತು ಎಂದು ಭಾವಪೂರ್ಣವಾಗಿ ನುಡಿದ ಮಾತುಗಳು ಎಲ್ಲರ ಮನ ಮುಟ್ಟಿದವು.
ಡಾಕ್ಟರ್ ರಾಜಕುಮಾರ್ ಅವರು ಮಾತನಾಡಿ, ನರಹರಿ ದೀಕ್ಷಿತ್ ಅವರು ಸೃಜನ ಸಂಗೀತ ಶಾಲೆಯನ್ನು ಇಷ್ಟು ಬೃಹದಾಕಾರವಾಗಿ ಬೆಳೆಸಿರುವುದನ್ನು ಕಂಡು ಸಂತಸ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಸಾಧನೆಗಳನ್ನು ಅಭಿನಂದಿಸಿದರು.
2025-26ರ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸೃಜನದ 18 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ಶ್ರೀಯುತ ಗಣೇಶ್ ಭಟ್ ಅವರು ಪೋಷಕರ ಪರವಾಗಿ ಮಾತನಾಡಿದರು.
ಬಹಳ ಸುಶ್ರಾವ್ಯವಾಗಿ ಮೂಡಿಬಂದ ಸೃಜನ ವಿದ್ಯಾರ್ಥಿಗಳ ಸಮೂಹ ಗಾಯನ, ನೆರೆದಿದ್ದವರ ಮನಸೂರೆಗೊಂಡಿತು.
ಯೂಟ್ಯೂಬ್ನಲ್ಲಿ ನೇರಪ್ರಸಾರಗೊಂಡ ಕಾರ್ಯಕ್ರಮವನ್ನು ದೇಶ-ವಿದೇಶಗಳಲ್ಲಿ ನೆಲೆಸಿರುವ ಸೃಜನ ವಿದ್ಯಾರ್ಥಿಗಳು ಮತ್ತು ಪೋಷಕರಾದಿಯಾಗಿ 2 ಸಾವಿರಕ್ಕೂ ಅಧಿಕ ಕಲಾಭಿಮಾನಿಗಳು ವೀಕ್ಷಿಸಿದರು.
ಸೃಜನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ನರಹರಿ ದೀಕ್ಷಿತ್ ಪ್ರಾಸ್ತಾವಿಕ ನುಡಿ ಪ್ರಸ್ತುತಪಡಿಸಿದರು. ಶ್ರೀಮತಿ ಪಾರ್ವತಿ ದೀಕ್ಷಿತ್ ವಂದನಾರ್ಪಣೆ ಸಲ್ಲಿಸಿದರು. ಶಾಲೆಯ ಸಂಪೂರ್ಣ ವಿದ್ಯಾರ್ಥಿ ವೃಂದ ಮತ್ತು ಪೋಷಕ ವರ್ಗ ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
