ಬೆಂಗಳೂರು: ‘ಬ್ರಾಹ್ಮೀ ಭಕ್ತವೃಂದ ಬೆಂಗಳೂರು’ ಅರ್ಪಿಸುವ ಹಾಗೂ ಅಂಪಾರು ಮಿತ್ರ ಬಳಗದ ಸಹಕಾರದೊಂದಿಗೆ ನಡೆಯುತ್ತಿರುವ ‘ಕಮಲಶಿಲೆ ಯಕ್ಷೋತ್ಸವ 2026’ರ ಪ್ರಯುಕ್ತ ಸಾಂಪ್ರದಾಯಿಕ ರಂಗಸ್ಥಳದ ಸೊಬಗಿನಲ್ಲಿ 6ನೇ ವರ್ಷದ ಅದ್ದೂರಿ ಯಕ್ಷಗಾನ ಪ್ರದರ್ಶನವು ಇಂದು (ನವೆಂಬರ್ 14, ಶನಿವಾರ) ರಾತ್ರಿ 9.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ.
ಈ ಯಕ್ಷಗಾನ ಕೂಟದಲ್ಲಿ ಪ್ರಮುಖವಾಗಿ ‘ವೀರಮಣಿ ಕಾಳಗ’, ‘ಕೀಚಕ ವಧೆ’, ‘ಹಿರಣ್ಯಾಕ್ಷ ವಧೆ’ ಹಾಗೂ ‘ಶ್ರೀನಿವಾಸ ಕಲ್ಯಾಣ’ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.
ರಂಗದಲ್ಲಿ ಮೆರೆಯಲಿರುವ ಹೆಮ್ಮೆಯ ರಂಗ ನಿಪುಣರ ವಿವರ ಇಂತಿದೆ: ಹಿಮ್ಮೇಳದ ಭಾಗವತರಾಗಿ ಮಧುಕರ ಹೆಗ್ಗೆ (ಮಡಾಮಕ್ಕಿ) ಮತ್ತು ಪವನ್ ಆಚಾರ್ಯ (ಅರೆಸಮ್ಮನಕಾನು), ಸಂಗೀತದಲ್ಲಿ ಪ್ರಭಾಕರ ನಾಗೂರು, ಮದ್ದಳೆಯಲ್ಲಿ ನಾಗರಾಜ್ ನಾಯ್ಕ್ (ಯದಮೊಗೆ) ಹಾಗೂ ಲೋಹಿತ್ ಕೊಮೆ, ಚಂಡೆಯಲ್ಲಿ ಶ್ರೀನಿವಾಸ್ ಪ್ರಭು (ಗುಂಡ) ಮತ್ತು ಅಜಿತ್ ಆಚಾರ್ಯ (ಕಲ್ಲೋಡು) ಪಾಲ್ಗೊಳ್ಳಲಿದ್ದಾರೆ.
ಮುಮ್ಮೇಳದ ಸ್ತ್ರೀ ವೇಷದಲ್ಲಿ ಪಂಜು ಪೂಜಾರಿ (ಬಗ್ವಾಡಿ), ಕೃಷ್ಣ ಗಾಣಿಗ (ಹೊಸಂಗಡಿ), ನಾಗರಾಜ್ ಪೂಜಾರಿ (ದೇವಲಂದ) ಮತ್ತು ಪ್ರಶಾಂತ್ ಕೋಟ ಹಾಗೂ ಹಾಸ್ಯ ಪಾತ್ರದಲ್ಲಿ ವಿಶ್ವನಾಥ ಭಂಡಾರಿ (ಕುಳ್ಳಂಬಳ್ಳಿ) ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಸಂಜೀವ ಗಾಣಿಗ (ಹೇರಂಜಾಲು), ಗೋಪಾಲ ಸೌಡ, ಸುನಿಲ್ ಪೂಜಾರಿ (ಹೋಳಾದು), ಉದಯ್ ಕೊಠಾರಿ (ಚಕ್ರಮೈದಾನ), ವಿಶ್ವನಾಥ ಪೂಜಾರಿ (ಹೆಣ್ಣಾಬೈಲು), ನಿತಿನ್ ಶೆಟ್ಟಿ (ಸಿದ್ದಾಪುರ), ಉಳ್ಳೂರು ನಾರಾಯಣ ನಾಯ್ಕ್, ವಿಶ್ವೇಶ್ ರೈ (ಸಿದ್ದಾಪುರ), ಆಶಿಕ್ ಪೂಜಾರಿ, ಗಣೇಶ್ ಗಡಿಕಟ್ಟೆ, ಮೇಘರಾಜ್ ಗುಮ್ಮಳ, ರತ್ನಾಕರ ಪೂಜಾರಿ, ಬಾಲಚಂದ್ರ ಮತ್ತು ಕು. ಅನ್ವಿತ್ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವಿಕ್ರಮ್ ಯಡಿಯಾಳ್ (96116 06357), ನಿತೀಶ್ ಜಾತ್ರೆ (94810 15750), ಹೇಮಂತ್ ಜಾತ್ರೆ (91646 11072) ಅಥವಾ ನಿತೀಶ್ ಮಯ್ಯ (97401 79906) ಅವರನ್ನು ಸಂಪರ್ಕಿಸಬಹುದಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
