ಹುಬ್ಬಳ್ಳಿ: ಸಂಸ್ಕಾರ ಭಾರತಿ, ಕ್ಷಮತಾ ಮತ್ತು ಮಂಗಲ ಭಾರತಿ, ಹಾಗೂ ಚೇಂಬರ್ ಆಫ್ ಕಾಮರ್ಸ್, ಸಿಂಫೋನಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ದಿವಂಗತ ಖ್ಯಾತ ಸಂಗೀತಗಾರ ಪಂಡಿತ್ ಶ್ರೀನಿವಾಸ್ ಜೋಶಿ ಅವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ಇದೇ ಸೆಪ್ಟೆಂಬರ್ 27 ರಂದು ಸಂಜೆ 5:30 ಗಂಟೆಗೆ ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ನಲ್ಲಿ ವಿಶೇಷ ಶ್ರದ್ಧಾಂಜಲಿ ಹಾಗೂ ಸಂಗೀತ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಂಸ್ಕಾರ ಭಾರತಿ, ಕ್ಷಮತಾ ಸಂಸ್ಥೆ, ಹುಬ್ಬಳ್ಳಿ ವಾಣಿಜ್ಯ ಮಂಡಳಿ (ಚೇಂಬರ್ ಆಫ್ ಕಾಮರ್ಸ್), ಮಂಗಲ ಭಾರತಿ ಮತ್ತು ಸಿಂಫೋನಿ ಸಂಗೀತ ಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಪ್ರಾಯೋಜಿಸುತ್ತಿದೆ.
ಈ ಸ್ಮರಣೋತ್ಸವದಲ್ಲಿ ದೇಶದ ಮೂವರು ಭರವಸೆಯ ಯುವ ಕಲಾವಿದರು ಭಾಗವಹಿಸಿ ತಮ್ಮ ಗಾಯನ ಮತ್ತು ವಾದನದ ಮೂಲಕ ದಿವಂಗತ ಪಂಡಿತ್ ಶ್ರೀನಿವಾಸ್ ಜೋಶಿ ಅವರಿಗೆ ಸ್ವರ ನಮನ ಸಲ್ಲಿಸಲಿದ್ದಾರೆ.
ಹುಬ್ಬಳ್ಳಿಯ ಪ್ರಸಿದ್ಧ ಕೊಳಲು ವಾದಕಿ ಶ್ರೀಮತಿ ಮಧು ಕುಲಕರ್ಣಿ (ಪಂಡಿತ್ ಪ್ರವೀಣ್ ಗೋಡ್ಖಂಡಿ ಅವರ ಶಿಷ್ಯೆ), ಬೆಂಗಳೂರಿನ ಖ್ಯಾತ ಗಾಯಕಿ ಶ್ರೀಮತಿ ಸಂಗೀತ ಹೆಗಡೆ ಹಾಗೂ ಸೀತಾರ್ ವಾದಕ ಶ್ರೀ ವಿಜಯ್ ಗೋದನಹಲು (ಪದ್ಮಭೂಷಣ ಪಂಡಿತ್ ಅರವಿಂದ್ ಪರೇಖ್ ಅವರ ಶಿಷ್ಯರು) ಈ ಕಾರ್ಯಕ್ರಮದಲ್ಲಿ ತಮ್ಮ ಕಲಾಪ್ರದರ್ಶನ ನೀಡಲಿದ್ದಾರೆ.
ಕಲಾವಿದರಾದ ಶ್ರೀ ಪ್ರಸಾದ್ ಮಡಿವಾಳರ್ ಮತ್ತು ಶ್ರೀ ಶಮಂತ್ ದೇಸಾಯಿ ತಬಲಾದಲ್ಲಿ ಹಾಗೂ ಶ್ರೀ ವಿನೋದ್ ಪಾಟೀಲ್ ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ನಗರದ ಎಲ್ಲಾ ಸಂಗೀತ ಪ್ರಿಯರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದಿವಂಗತ ಪಂಡಿತ್ ಶ್ರೀನಿವಾಸ್ ಜೋಶಿ ಅವರ ಪ್ರಥಮ ಪುಣ್ಯಸ್ಮರಣೆಯ ಗೌರವ ವಂದನೆ ಹಾಗೂ ಸಂಗೀತ ಸುಧೆಯನ್ನು ಆಸ್ವಾದಿಸಬೇಕಾಗಿ ಕ್ಷಮತಾ ಮತ್ತು ಮಂಗಲಭಾರತಿ, ಸಿಂಫೋನಿ ಸಂಸ್ಥೆಗಳ ಅಧ್ಯಕ್ಷರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
