ಬೆಂಗಳೂರು: ಸ್ವಾಮಿ ರಾಮತೀರ್ಥ ಜಯಂತಿಯ ಅಂಗವಾಗಿ ಬೆಂಗಳೂರಿನಲ್ಲಿ ಅಕ್ಟೋಬರ್ 31ರಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಸ್ವಾಮಿ ರಾಮತೀರ್ಥರ ಬೋಧಕ ಕಥೆಗಳ ಕುರಿತಾದ ಕನ್ನಡ ಕೃತಿಯನ್ನು ಲೋಕಾರ್ಪಣೆ ಮಾಡಲಾಗುತ್ತದೆ.
ರಾಮತೀರ್ಥ ಸೇವಾ ಫೌಂಡೇಶನ್ ವತಿಯಿಂದ ಶನಿವಾರ ಸಂಜೆ 6.15ಕ್ಕೆ ಜಯನಗರದ 2ನೇ ಬ್ಲಾಕ್ನಲ್ಲಿರುವ ಆರ್.ವಿ. ಶಿಕ್ಷಕರ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಡಾ. ಕೃಷ್ಣ ದೀಕ್ಷಿತ್ ಅವರು ಶುಭಾಶಂಸನೆ ಮಾಡಲಿದ್ದಾರೆ. ಇವರು ಕರ್ನಾಟಕ ಹಾಗೂ ಒರಿಸ್ಸಾ ಉಚ್ಚ ನ್ಯಾಯಾಲಯಗಳ ಪೂರ್ವ ನ್ಯಾಯಮೂರ್ತಿಗಳಾಗಿದ್ದಾರೆ.
ಕೃತಿ ಲೋಕಾರ್ಪಣೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹಿರಿಯ ಮನೋವೈದ್ಯ ಹಾಗೂ ವಿಶಿಷ್ಟ ವಿಜ್ಞಾನಿ, ಕೇಂದ್ರ ಸರ್ಕಾರದ ಆಯುಷ್ ವಿಭಾಗದ ಪೂರ್ವ ನಿರ್ದೇಶಕ ಮತ್ತು ನಿಮ್ಹಾನ್ಸ್ನ ಪೂರ್ವ ನಿರ್ದೇಶಕರಾದ ಡಾ. ಬಿ.ಎನ್. ಗಂಗಾಧರ್ ನೆರವೇರಿಸಲಿದ್ದಾರೆ.
ಯುವಾ ಬ್ರಿಗೇಡ್ನ ಸಂಸ್ಥಾಪಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ಉಪಸ್ಥಿತರಿರಲಿದ್ದಾರೆ. ರಾಮತೀರ್ಥ ಸೇವಾ ಫೌಂಡೇಶನ್ನ ಶ್ರೀ ಬಿ. ರಾಘವೇಂದ್ರ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸ್ವಾಮಿ ರಾಮತೀರ್ಥರ ಜೀವನದ ಆದರ್ಶಗಳು ಹಾಗೂ ಅವರ ಬೋಧನೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಆಹ್ವಾನಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
