ಹಿಂದಿನ ಕಾಲದಲ್ಲಿ ಐವತ್ತು ದಾಟಿದ ತಕ್ಷಣ ಮನೆಗೆ ಅಜ್ಜನ ಪಟ್ಟ ಸಿಗುತ್ತಿತ್ತು. ಅಜ್ಜನ ಕೈಯಲ್ಲಿದ್ದ ಕೋಲು ಕೇವಲ ನಡಿಗೆಯ ಆಸರೆಯಷ್ಟೇ ಅಲ್ಲದೆ, ಕಿಡಿಗೇಡಿ ಮಕ್ಕಳನ್ನು ತಿದ್ದುವ ಸಾಧನವೂ ಆಗಿತ್ತು. ಹಿರಿಯರು ಊರಿನ ಬೇವಿನ ಮರದ ಅಡಿಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರೂ, ಹಗ್ಗ ಹೊಸೆಯುವುದು ಹಾಗೂ ಕೃಷಿ ಉಪಕರಣ ಸಿದ್ಧಪಡಿಸುವ ಕೆಲಸಗಳಲ್ಲಿ ನಿರತರಾಗಿರುತ್ತಿದ್ದರು. ಊರಿನ ಮದುವೆ-ಸಮಾರಂಭಗಳಲ್ಲಿ ಯಜಮಾನಿಕೆ ವಹಿಸುತ್ತಿದ್ದ ಅವರು, ಆಧುನಿಕ ಸಿಎಸ್ಟಿವಿ ಕ್ಯಾಮೆರಾಗಳಿಗಿಂತಲೂ ಕ್ರಿಯಾಶೀಲವಾಗಿ ಅನೌಪಚಾರಿಕ ಕಣ್ಗಾವಲು ಪಡೆಯಾಗಿ ಕೆಲಸ ಮಾಡುತ್ತಿದ್ದರು. ಅಪರಾಧಗಳು ನಡೆಯದಂತೆ ತಡೆಯುತ್ತಿದ್ದ ಈ ವ್ಯವಸ್ಥೆಯಿಂದ ಗ್ರಾಮ ಜೀವನ ಸುವ್ಯವಸ್ಥಿತವಾಗಿತ್ತು.
ಇಂದಿನ ಜರ್ಮನಿ ದೇಶದಲ್ಲಿ ಯುವಪೀಳಿಗೆ ಸಾರ್ವಜನಿಕ ಶಿಸ್ತು ಪಾಲಿಸುವಲ್ಲಿ ಹಿರಿಯರ ಕೊಡುಗೆ ದೊಡ್ಡದಾಗಿದೆ. ಅಲ್ಲಿನ ಹಿರಿಯ ನಾಗರಿಕರು ತಾವು ಕುಳಿತ ಜಾಗದಿಂದಲೇ ಅನಾಗರಿಕ ವರ್ತನೆಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಸಂಬಂಧಪಟ್ಟ ಸರ್ಕಾರಿ ಇಲಾಖೆಗೆ ಕಳುಹಿಸುತ್ತಾರೆ. ಅಧಿಕಾರಿಗಳು ತಕ್ಷಣವೇ ಆನ್ಲೈನ್ ಮೂಲಕ ದಂಡ ವಿಧಿಸುವುದರಿಂದ ಜಗಳಗಳಿಲ್ಲದೆ ಶಿಸ್ತು ನಿರ್ಮಾಣವಾಗಿದೆ. ಮೂಲತಃ ನಮ್ಮ ದೇಶದ ಹಿರಿಯರು ಸ್ವಇಚ್ಛೆಯಿಂದ ಮಾಡುತ್ತಿದ್ದ ಈ ಸತ್ಪದ್ಧತಿಯೇ ಇಂದು ವಿದೇಶಗಳಲ್ಲಿ ಜಾರಿಯಲ್ಲಿದೆ.
ಈಗ ಕಾಲ ಬದಲಾಗಿದೆ, ಅಜ್ಜನ ಕೋಲುಗಳೂ ಮಾಯವಾಗಿವೆ. ನಿವೃತ್ತಿಯ ನಂತರವೂ ಲೌಕಿಕ ವ್ಯಾಪಾರ-ವಹಿವಾಟುಗಳಲ್ಲೇ ಮುಳುಗಿರುವುದು ಅಥವಾ ಟಿವಿ ನೋಡುತ್ತ ಸಮಯ ಕಳೆಯುವುದಕ್ಕಿಂತ ಹಿರಿಯರು ಜೀವನದ ನಿಜವಾದ ಅರ್ಥವನ್ನು ಕಂಡುಕೊಳ್ಳಬೇಕಿದೆ. ಮಕ್ಕಳಿಗೆ ಕುಟುಂಬದ ಜವಾಬ್ದಾರಿ ನಿರ್ವಹಿಸಲು ಅವಕಾಶ ನೀಡಬೇಕು. ಅವರ ಸಮಸ್ಯೆಗಳನ್ನು ಅವರೇ ಸ್ವತಃ ಎದುರಿಸಲು ಬೆಂಬಲವಾಗಿರಬೇಕೇ ಹೊರತು, ಅವರ ಕೆಲಸಗಳನ್ನು ತಾವೇ ಮಾಡಬಾರದು. ಮನೆಗೆ ಮಾರ್ಗದರ್ಶಕರಾಗಿ, ಮೊಮ್ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುತ್ತ ವಾನಪ್ರಸ್ಥ ಮತ್ತು ಸನ್ಯಾಸ ಆಶ್ರಮದ ಆಶಯದಂತೆ ಬದುಕಬೇಕು. ಹಿರಿಯರೇ ಕೊನೆವರೆಗೂ ಸಂಪಾದನೆಗೆ ಅಂಟಿಕೊಂಡರೆ ಯುವಪೀಳಿಗೆಗೆ ಅವಕಾಶಗಳು ವಂಚಿತವಾಗುತ್ತವೆ.
ಹಿರಿಯ ನಾಗರಿಕರು ಸಮಾಜದ ಕಣ್ಣು ಮತ್ತು ಕಿವಿಗಳಾಗಬೇಕು. ನಮ್ಮ ಸುತ್ತಮುತ್ತ ನಡೆಯುವ ಕಸ ಚೆಲ್ಲುವುದು, ನೀರು ಪೋಲು ಮಾಡುವುದು, ರಸ್ತೆ ನಿಯಮಗಳ ಉಲ್ಲಂಘನೆ, ಗಿಡ-ಮರ ಕಡಿಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಹಾಗೂ ಧೂಮಪಾನದಂತಹ ಅನಾಗರಿಕ ಚಟುವಟಿಕೆಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದು ಮಹಾನಗರ ಪಾಲಿಕೆ ಅಥವಾ ಪೊಲೀಸ್ ಇಲಾಖೆಗೆ ಕಳುಹಿಸಬೇಕು.
ಹಿರಿಯ ನಾಗರಿಕರು ದೇಶಭಕ್ತರಾಗಿ, ತಮ್ಮ ಬಡಾವಣೆಗೆ ನಿಜವಾದ ನಾಯಕರಾಗಬೇಕು. ಸಮಾಜದಲ್ಲಿ ಸತ್ಕಾರ್ಯಗಳು ಮತ್ತು ಧಾರ್ಮಿಕ-ನೈತಿಕ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಬೇಕು. ಲೌಕಿಕ ಬದುಕಿನಿಂದ ಅಲೌಕಿಕ ಬದುಕಿನತ್ತ ಸಾಗುವ ಧೀಮಂತ ವ್ಯಕ್ತಿತ್ವ ನಮ್ಮದಾಗಬೇಕು. ಇಹಲೋಕ ತ್ಯಜಿಸಿದಾಗ ಜನಮಾನಸದಲ್ಲಿ ಕಣ್ಣೀರು ತಾನಾಗಿಯೇ ಹರಿಯುವಂತೆ, ಸತ್ತ ಮೇಲೂ ಬದುಕಿರುವಂತೆ ‘ಪ್ರಾತಃಸ್ಮರಣೀಯ’ರಾಗಿ ಜೀವಿಸಿದರೆ ಮಾತ್ರ ಹಿರಿಯ ಜೀವಗಳ ಬದುಕು ಸಾರ್ಥಕವಾಗುತ್ತದೆ.
ಹಿರಿಯ ನಾಗರಿಕರು ಸಮಾಜದ ಆಸ್ತಿಯಾಗಬೇಕು; ಪ್ರಾತಃಸ್ಮರಣೀಯರಾಗಬೇಕು.

- ಮಹಾದೇವಯ್ಯ ಕರದಳ್ಳಿ
ಗಿರಿಧಾಮ, ರಾಷ್ಟ್ರಕೂಟ ರಸ್ತೆ, ಓಂ ನಗರ,
ವಿಶ್ವವಿದ್ಯಾಲಯ ಮಾರ್ಗ, ಕಲಬುರಗಿ – 585 105
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122