ಬೆಂಗಳೂರು: ಮಂಡ್ಯದ ಅಡ್ವೈಸರ್ ಮಾಸಪತ್ರಿಕೆ ವಾರ್ಷಿಕವಾಗಿ ನಡೆಸುವ, 2025ರ ರಾಷ್ಟ್ರ ಮಟ್ಟದ ಪುಸ್ತಕ ಪ್ರಶಸ್ತಿಗೆ ವನರಾಗ ಶರ್ಮರ ಸಂಪೂರ್ಣ ಮಧುರ ರಾಮಾಯಣ ಮಹಾಕಾವ್ಯ ಆಯ್ಕೆಯಾಗಿದೆ. ಭಾಮಿನಿ ಷಟ್ಪದಿಯಲ್ಲಿ ರಚಿಸಲಾದ 19524 ಸಾಲುಗಳ ಮಹಾಕಾವ್ಯ ವರ್ತಮಾನ ಕಾಲಘಟ್ಟದ ಒಂದು ಶ್ರೇಷ್ಠ ಕೃತಿ ಎಂದು ಉಲ್ಲೇಖಿಸಲಾಗಿದೆ. ಪ್ರಶಸ್ತಿ ನಗದು ಬಹುಮಾನ, ಪ್ರಮಾಣ ಪತ್ರ, ಫಲಕ, ಪುಸ್ತಕ ಮತ್ತು ಇತರ ಪರಿಕರಗಳನ್ನು ಒಳಗೊಂಡಿದೆ ಎಂದು ಸಂಪಾದಕ ಮತ್ತು ಆರ್ಗನೈಸರ್ ಬಸವರಾಜು ಅವರು ತಿಳಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
