ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಹಿರಿಯ ಕಾರ್ಯಕರ್ತ, ವಿಕ್ರಮ ವಾರಪತ್ರಿಕೆಯ ಲೇಖನ, ಪ್ರಸರಣ, ಜಾಹೀರಾತು ವಿಭಾಗಗಳಲ್ಲಿ ಎರಡು ದಶಕಗಳಿಗೂ ಅಧಿಕ ಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಮಾಲೂರು ಶಂಕರ್ ಅವರು ಗುರುವಾರ (ಸೆ.3) ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಕೋಲಾರದ ಮಾಲೂರಿನಲ್ಲಿ ಜನಿಸಿದ ಅವರು ಎಳೆಯ ವಯಸ್ಸಿನಿಂದಲೇ ಸಂಘದ ಸಂಪರ್ಕಕ್ಕೆ ಬಂದು, ಸ್ವಯಂಸೇವಕರಾಗಿ ನಾನಾ ಸ್ತರಗಳಲ್ಲಿ ಸಂಘದ ಕಾರ್ಯಗಳನ್ನು ಮಾಡುತ್ತಿದ್ದರು. ವೃತ್ತಿಯಿಂದ ವಕೀಲರಾಗಿದ್ದರು. ಸುಮಾರು ಎರಡೂವರೆ ದಶಕಗಳಿಂದ ವಿಕ್ರಮ ವಾರಪತ್ರಿಕೆಯ ಜತೆಗೆ ನಿಕಟ ನಂಟು ಹೊಂದಿದ್ದ ಅವರು ಪತ್ರಿಕೆಯಲ್ಲಿ ಹಲವು ಲೇಖನಗಳನ್ನು ಬರೆದಿದ್ದರು. ಅಲ್ಲದೆ, ಪುಂಗವ, ವಿಕ್ರಮ ಪ್ರಸರಣ, ಸಾಹಿತ್ಯ ಪ್ರಸಾರ, ಮಂಥನಕ್ಕಾಗಿ ಸಂಪರ್ಕ, ವೈಚಾರಿಕ ವಲಯದ ಹಿರಿಯರ ಭೇಟಿ ಮುಂತಾದ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ವಹಿಸಿ ಹಲವಾರು ವರ್ಷಗಳಿಂದ ಪ್ರಚಾರ ವಿಭಾಗದ ವಿವಿಧ ಆಯಾಮಗಳಿಗೆ ಸಹಕಾರಿಯಾಗಿದ್ದರು.
ಇತ್ತೀಚೆಗೆ ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದರು. ಪರಿಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
